ಈಡಿ, ಸಿಬಿಐ ಅಂತ ಹೆದರಿಸಿದರೆ ಯೋಗೇಶ್ವರ್ ಬಾಲ ಮುದುರಿಕೊಂಡು ಮನೆ ಸೇರುತ್ತಾರೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2024 | 12:20 PM

ಬೆಂಗಳೂರಲ್ಲಿ ನಿನ್ನೆ ಯೋಗೇಶ್ವರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರಿಗೆ ಸವಾಲೆಸೆಯುವ ಸ್ವರದಲ್ಲಿ ಮಾತಾಡಿದ್ದರು. ಅವರ ಮಾತಿನ ಧಾಟಿ ಗಮನಿಸಿದರೆ, ಕಾಂಗ್ರೆಸ್ ಪಕ್ಷದೊಂದಿಗೆ ಅವರು ಮಾತುಕತೆ ನಡೆಸಿರುವ ಅನುಮಾನ ಸೃಷ್ಟಿಯಾಗಿತ್ತು. ಆದರೆ ಶಿವಕುಮಾರ್ ಅಂಥ ಸುಳಿವು ನೀಡಲಿಲ್ಲ.

ದೆಹಲಿ: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಿಢೀರನೆ ದೆಹಲಿಗೆ ತೆರಳಿದ್ದಾರೆ, ಯಾಕೆ ಅಂತ ಅವರು ಹೇಳಿಲ್ಲ. ರಾಷ್ಟ್ರದ ರಾಜಧಾನಿಯಲ್ಲಿ ಪತ್ರಕರ್ತರೊಂದಿಗೆ ಮಾತಾಡಿದ ಅವರು ತಮ್ಮ ದೆಹಲಿ ಭೇಟಿಯ ಕಾರಣ ಬಹಿರಂಗಪಡಿಸಲಿಲ್ಲ. ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಸಿಪಿ ಯೋಗೇಶ್ವರ್ ಚನ್ನಪಟ್ಟಣದಿಂದ ಟಿಕೆಟ್ ಸಿಗದೇ ಹೋದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿರುವುದನ್ನು ಅವರಿಗೆ ತಿಳಿಸಿದಾಗ, ಯಾರು ಏನು ತೀರ್ಮಾನ ಮಾಡುತ್ತಾರೆ ಅಂತ ಈಗಲೇ ಹೇಗೆ ಹೇಳಲು ಸಾಧ್ಯ? ಮೊದಲೆಲ್ಲ ಹಾಗೆ ಹೇಳುತ್ತಾರೆ, ಅದರೆ ಈಡಿ, ಸಿಬಿಐ ಅಂತ ಹೆದರಿಸಿದಾಕ್ಷಣ ಬಾಲ ಮುದುರಿಕೊಂಡು ಮನೆ ಸೇರುತ್ತಾರೆ ಎಂದು ಶಿವಕುಮಾರ್ ವ್ಯಂಗ್ಯವಾಗಿ ಹೇಳಿದರು. ರಾಹುಲ್ ಗಾಂಧಿಯವರು ಮತ್ತೊಮ್ಮೆ ಈಡಿ ತನ್ನನ್ನು ವಿಚಾರಣೆಗೆ ಕರೆಯಲಿದೆಯೆಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಇಂಥದ್ದನ್ನೆಲ್ಲ ಅವರು ಬಹಳ ನೋಡಿದ್ದರೆ, ಯಾವುದೇ ವಿಚಾರಣೆಗೆ ಅವರು ಹೆದರುವುದಿಲ್ಲ ಎಂದು ತಮ್ಮ ನಾಯಕನ ಬಗ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಶುಗರ್ ಕಾರ್ಖಾನೆ ಉಳಿಸಿಕೊಳ್ಳುವುದೇ ಅಥವಾ ಹೊಸ ಕಾರ್ಖಾನೆ ಆರಂಭಿಸುವುದೇ? ಡಿಕೆ ಶಿವಕುಮಾರ್ ಹೇಳಿದ್ದಿಷ್ಟು

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.