ILT20 2025: ಕ್ಯಾಪಿಟಲ್ಸ್​ಗೆ ಸೋಲು: ವೈಪರ್ಸ್ ಶುಭಾರಂಭ

Updated on: Dec 03, 2025 | 12:05 PM

Dubai Capitals vs Desert Vipers: ಮೊದಲು ಬ್ಯಾಟ್ ಮಾಡಿದ ದುಬೈ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 150 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಸರ್ಟ್ ವೈಪರ್ಸ್ ಪರ ಆ್ಯಂಡ್ರೀಸ್ ಗೌಸ್ 36 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 56 ರನ್ ಬಾರಿಸಿದರು. ಈ ಮೂಲಕ ಡೆಸರ್ಟ್ ವೈಪರ್ಸ್ ತಂಡವು 19 ಓವರ್​ಗಳಲ್ಲಿ 151 ರನ್​ಗಳಿಸಿ 4 ವಿಕೆಟ್​ಗಳ ಜಯ ಸಾಧಿಸಿದೆ.

ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿ ಶುರುವಾಗಿದೆ. ಯುಎಇ ಕ್ರಿಕೆಟ್ ಬೋರ್ಡ್ ಆಯೋಜಿಸುವ ಈ ಟೂರ್ನಿಯ 4ನೇ ಸೀಸನ್​ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದುಬೈ ಕ್ಯಾಪಿಟಲ್ಸ್ ಹಾಗೂ ಡೆಸರ್ಟ್ ವೈಪರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಡೆಸರ್ಟ್ ವೈಪರ್ಸ್ ತಂಡದ ನಾಯಕ ಸ್ಯಾಮ್ ಕರನ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ದುಬೈ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 150 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಸರ್ಟ್ ವೈಪರ್ಸ್ ಪರ ಆ್ಯಂಡ್ರೀಸ್ ಗೌಸ್ 36 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 56 ರನ್ ಬಾರಿಸಿದರು. ಈ ಮೂಲಕ ಡೆಸರ್ಟ್ ವೈಪರ್ಸ್ ತಂಡವು 19 ಓವರ್​ಗಳಲ್ಲಿ 151 ರನ್​ಗಳಿಸಿ 4 ವಿಕೆಟ್​ಗಳ ಜಯ ಸಾಧಿಸಿದೆ.

ದುಬೈ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಸೆದಿಕುಲ್ಲಾ ಅಟಲ್ , ಶಯಾನ್ ಜಹಾಂಗೀರ್ , ಜೋರ್ಡನ್ ಕಾಕ್ಸ್ , ರೋವ್ಮನ್ ಪೊವೆಲ್ ,
ದಾಸುನ್ ಶನಕ (ನಾಯಕ) , ಮೊಹಮ್ಮದ್ ನಬಿ , ಡೇವಿಡ್ ವಿಲ್ಲಿ , ಗುಲ್ಬಾದಿನ್ ನೈಬ್ , ಹೈದರ್ ಅಲಿ ,ವಕಾರ್ ಸಲಾಮ್‌ಖೈಲ್ ,
ಮುಹಮ್ಮದ್ ಜವಾದುಲ್ಲಾ.

ಡೆಸರ್ಟ್ ವೈಫರ್ಟ್ ಪ್ಲೇಯಿಂಗ್ 11: ಫಖರ್ ಝಮಾನ್ , ಆಂಡ್ರೀಸ್ ಗೌಸ್, ವೃತ್ಯ ಅರವಿಂದ್ , ಡಾನ್ ಲಾರೆನ್ಸ್ , ಶಿಮ್ರಾನ್ ಹೆಟ್ಮಿಯರ್ , ಹಸನ್ ನವಾಜ್ , ಸ್ಯಾಮ್ ಕರನ್ (ನಾಯಕ) , ನೂರ್ ಅಹ್ಮದ್ , ಖುಜೈಮಾ ತನ್ವೀರ್ , ಡೇವಿಡ್ ಪೇನ್ , ನಸೀಮ್ ಷಾ.

 

 

Published on: Dec 03, 2025 12:04 PM