AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರ ಹಂಚಿಕೆ​​, ಕ್ರಾಂತಿ ಬಗ್ಗೆ ರಾಜಣ್ಣ ಸ್ಫೋಟಕ ಹೇಳಿಕೆ: ಹೇಳಿದ್ದೇನು ನೋಡಿ

ಅಧಿಕಾರ ಹಂಚಿಕೆ​​, ಕ್ರಾಂತಿ ಬಗ್ಗೆ ರಾಜಣ್ಣ ಸ್ಫೋಟಕ ಹೇಳಿಕೆ: ಹೇಳಿದ್ದೇನು ನೋಡಿ

Jagadisha B
| Updated By: Ganapathi Sharma|

Updated on: Dec 03, 2025 | 12:27 PM

Share

ಕೆ.ಎನ್. ರಾಜಣ್ಣ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ವಿಷಯ ಮತ್ತು ಬ್ರೇಕ್​ಫಾಸ್ಟ್ ಮೀಟಿಂಗ್ ಬಗ್ಗೆ ವಿಡಂಬನಾತ್ಮಕವಾಗಿ ವಿವರಿಸಿದ್ದಾರೆ. ಯಾವುದೇ ಬದಲಾವಣೆಗಳು ನಡೆಯುವ ಸಾಧ್ಯತೆ ಇಲ್ಲ ಎಂದು ಹೇಳಿರುವ ಅವರು, ಸಚಿವ ಸಂಪುಟ ವಿಸ್ತರಣೆಯು ಬೆಳಗಾವಿ ಅಧಿವೇಶನದ ನಂತರ ಆಗಲಿದೆ ಎಂದು ತಿಳಿಸಿದ್ದಾರೆ.

ತುಮಕೂರು, ಡಿಸೆಂಬರ್ 3: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಚರ್ಚೆ ಹಾಗೂ ‘ಬ್ರೇಕ್​ಫಾಸ್ಟ್ ಮೀಟಿಂಗ್​’ಗಳ ಬಗ್ಗೆ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮೊದಲು ಹೆಣ್ಣು ನೋಡಲು ಹೋಗುತ್ತಾರೆ, ನಂತರ ಮನೆ ನೋಡಲು ಹೋಗುತ್ತಾರೆ. ಅದೇ ರೀತಿ ಈ ಬ್ರೇಕ್​ಫಾಸ್ಟ್ ಮೀಟಿಂಗ್ ಎಂದು ಅವರು ತುಮಕೂರಿನಲ್ಲಿ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಪದ್ಧತಿಗೆ ಹೋಲಿಸಿದ್ದಾರೆ. ಅಲ್ಲದೆ, ಏನಿದೆಯೋ ಅದೇ ಮುಂದುವರಿದುಕೊಂಡು ಹೋಗುತ್ತದೆ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ