‘ಡೆವಿಲ್’ ಸುದ್ದಿಗೋಷ್ಠಿಗೆ ವಿಜಯಲಕ್ಷ್ಮೀ ಬಂದಿಲ್ಲವೇಕೆ? ಉತ್ತರಿಸಿದ ಪ್ರಕಾಶ್
‘ಡೆವಿಲ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗಲಿದೆ. ಈ ಚಿತ್ರದ ಸುದ್ದಿಗೋಷ್ಠಿ ಡಿಸೆಂಬರ್ 2ರಂದು ನಡೆಯಿತು. ಈ ವೇಳೆ ವಿಜಯಲಕ್ಷ್ಮೀ ಅವರು ಏಕೆ ಬಂದಿಲ್ಲ ಎಂಬುದಕ್ಕೆ ನಿರ್ದೇಶಕ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.
‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ನಡೆಯಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ಡಿಸೆಂಬರ್ 2ರಂದು ನಡೆದಿದೆ. ವಿಜಯಲಕ್ಷ್ಮೀ ಅವರು ಪ್ರತಿ ಹಂತದಲ್ಲೂ ಚಿತ್ರಕ್ಕೆ ಬೆಂಬಲವಾಗಿದ್ದಾರೆ. ಆದರೆ, ಸುದ್ದಿಗೋಷ್ಠಿಗೆ ಬಂದಿಲ್ಲ. ಇದಕ್ಕೆ ಕಾರಣ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪ್ರಕಾಶ್ ಅವರು, ‘ಇದು ಅವರ ಆಯ್ಕೆ. ಬಹುಶಃ ಅವರು ನಗರದಲ್ಲಿಯೂ ಇಲ್ಲ ಅನಿಸುತ್ತದೆ. ಅವರು ಚಿತ್ರಕ್ಕೆ ಒಳ್ಳೆಯ ರೀತಿಯಲ್ಲಿ ಬೆಂಬಲವಾಗಿ ನಿಂತಿದ್ದಾರೆ’ ಎಂದಿದ್ದಾರೆ. ಇದರ ಸಂಪೂರ್ಣ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

