ಸ್ಪಂದನ ವಿಜಯರಾಘವೇಂದ್ರ ಹೋಟೆಲ್ ರೂಮಲ್ಲಿ ಕುಸಿದಬಿದ್ದ ಬಳಿಕ ಅವರನ್ನು ದಾಖಲಿಸಿದ ಬ್ಯಾಂಕಾಕ್ ಆಸ್ಪತ್ರೆಯ ಇಮೇಜ್ ಮಿಡಿಯಾಗೆ ಲಭ್ಯ
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸ್ಪಂದನ ಅವರಿಗೆ ರಕ್ತದೊತ್ತಡ ಅಪಾಯಕಾರಿಯಾಗಿ ಕಡಿಮೆಯಾಗಿ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು,
ಬೆಂಗಳೂರು: ನಿನ್ನೆ ಬೆಳಗಿನ ಜಾವ ಹಠಾತ್ತನೆ ಹೃದಯಾಘಾತಕ್ಕೊಳಗಾಗಿ ಕೇವಲ ತಮ್ಮ 41ನೇ ವಯಸ್ಸಲ್ಲಿ ಸಾವನ್ನಪ್ಪಿದ ಸ್ಪಂದನ ವಿಜಯರಾಘವೇಂದ್ರ (Spandan Vijay Raghavendra) ಅವರನ್ನು ದಾಖಲಿಸಿದ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿರುವ (Bangkok) ಆಸ್ಪತ್ರೆಯ (Bangkok Hospital) ಇಮೇಜ್ ನಮಗೆ ಲಬ್ಭವಾಗಿದೆ. ವಿಡಿಯೋದ ಎಡಭಾಗದಲ್ಲಿ ಕಾಣುತ್ತಿರುವ ಬಹುಮಡಿಯ ಆಸ್ಪತ್ರೆಗೆ ಸ್ಪಂದನ ಅವರನ್ನು ಸೋಮವಾರ ಬೆಳಗಿನ ಜಾವ ದಾಖಲಿಸಲಾಗಿತ್ತು. ಆಸ್ಪತ್ರೆಯ ಹೆಸರು ಓದುವುದು ಸಾಧ್ಯವಾಗದು, ಅದನ್ನು ಆ ದೇಶದ ಲಿಪಿಯಲ್ಲಿ ಬರೆಯಲಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸ್ಪಂದನ ಅವರಿಗೆ ರಕ್ತದೊತ್ತಡ ಅಪಾಯಕಾರಿಯಾಗಿ ಕಡಿಮೆಯಾಗಿ ಹೃದಯಾಘಾತವಾಗಿದೆ. ಕುಸಿದುಬಿದ್ದ ಅವರನ್ನು ಕೂಡಲೇ ಇಲ್ಲಿ ಕಾಣುವ ಆಸ್ಪತ್ರೆಗೆ ಸಾಗಿರುವ ವ್ಯವಸ್ಥೆ ಮಾಡಲಾಗಿದೆಯಾದರೂ ಅಲ್ಲಿಗೆ ತಲುಪುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಆಸ್ಪತ್ರೆ ಸಿಬ್ಬಂದಿ ಬ್ರಾಟ್ ಡೆಡ್ ಎಂದು ಘೋಷಿಸಿದರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ