Daily Devotional: ದೇವರ ಮನೆಯಲ್ಲಿನ ಕಲಶದ ಮಹತ್ವ ತಿಳಿದುಕೊಳ್ಳಿ

|

Updated on: Feb 07, 2024 | 6:33 AM

ಹಿಂದೂ ಧರ್ಮದಲ್ಲಿ ಕಲಶ ಪೂಜೆ ಬಹಳ ಮಹತ್ವ ನೀಡಲಾಗಿದೆ. ದೇವರ ಮನೆಯಲ್ಲಿ ಪ್ರತಿದಿನ ಅಥವಾ ಹಬ್ಬದ ಸಂದರ್ಭಗಳಲ್ಲಿ ಕಲಶವಿಟ್ಟು ಪೂಜೆ ಮಾಡುತ್ತಾರೆ. ಕಲಶವನ್ನು ಹಿತ್ತಾಳೆ ಅಥವಾ ತಾಮ್ರದಿಂದ ಮಾಡಲಾಗುತ್ತದೆ. ಕಲಶವನ್ನು ಪೂಜಿಸುವುದು ಹೇಗೆ..? ಕಲಶದ ಮಹತ್ವವೇನು ಗೊತ್ತೇ..? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಹಿಂದೂ ಧರ್ಮದಲ್ಲಿ ಕಲಶ ಪೂಜೆ ಬಹಳ ಮಹತ್ವ ನೀಡಲಾಗಿದೆ. ದೇವರ ಮನೆಯಲ್ಲಿ ಪ್ರತಿದಿನ ಅಥವಾ ಹಬ್ಬದ ಸಂದರ್ಭಗಳಲ್ಲಿ ಕಲಶವಿಟ್ಟು ಪೂಜೆ ಮಾಡುತ್ತಾರೆ. ಕಲಶ ಪೂಜೆ ನಮ್ಮ ಪೂರ್ವಜರ ಕಾಲದಿಂದಲೂ ಬಂದಿರುವಂತಹ ಬಹಳ ಪ್ರಾಚೀನವಾದ ಭಾರತೀಯ ಧಾರ್ಮಿಕ ಅಭ್ಯಾಸವಾಗಿದೆ. ಕಲಶದಲ್ಲಿ ಲಕ್ಷ್ಮೀ ದೇವಿಯು ಇರುತ್ತಾಳೆ ಎನ್ನುವ ನಂಬಿಕೆ ಮೊದಲಿನಿಂದಲೂ ನಮ್ಮಲ್ಲಿ ಇದೆ. ಕಲಶವನ್ನು ಹಿತ್ತಾಳೆ ಅಥವಾ ತಾಮ್ರದಿಂದ ಮಾಡಲಾಗುತ್ತದೆ. ಕಲಶವನ್ನು ಪೂಜಿಸುವುದು ಹೇಗೆ..? ಕಲಶದ ಮಹತ್ವವೇನು ಗೊತ್ತೇ..? ಹಬ್ಬದ ಆಚರಣೆಗಳ ಸಮಯದಲ್ಲಿ, ಕಲಶವನ್ನು ನೀರು, ನಾಣ್ಯಗಳು, ಅಕ್ಕಿ ಅಥವಾ ಆಭರಣಗಳಿಂದ ತುಂಬಿ ನಂತರ ತಲೆಕೆಳಗಾದಂತೆ ತೆಂಗಿನಕಾಯಿಯನ್ನು ಮೇಲೆ ಇರಿಸಲಾಗುತ್ತದೆ. ಈ ಸಮಯದಲ್ಲಿ, ಇದನ್ನು ಪೂರ್ಣ ಕಲಶ ಅಥವಾ ಪೂರ್ಣ ಕುಂಭ ಎಂದು ಕರೆಯಲಾಗುತ್ತದೆ. ಸಾಮನ್ಯವಾಗಿ ಪೂರ್ಣ ಕಲಶವನ್ನು ದೇವರ ಕೋಣೆಯಲ್ಲಿ ಪ್ರತಿದಿನ ಅಥವಾ ವಿಶೇಷ ಹಬ್ಬದ ಪೂಜೆಗಳಲ್ಲಿ ಇಡಲಾಗುತ್ತದೆ