‘ನಾನು ಶೃಂಗೇರಿಗೆ ಹೋಗಿ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ’; ಖುಷಿ ಸುದ್ದಿ ಕೊಟ್ಟ ಸಂಗೀತಾ

‘ನಾನು ಶೃಂಗೇರಿಗೆ ಹೋಗಿ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ’; ಖುಷಿ ಸುದ್ದಿ ಕೊಟ್ಟ ಸಂಗೀತಾ

ರಾಜೇಶ್ ದುಗ್ಗುಮನೆ
|

Updated on: Feb 07, 2024 | 8:14 AM

ಸಂಗೀತಾ ಶೃಂಗೇರಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರು ‘ಬಿಗ್ ಬಾಸ್’ ಎರಡನೇ ರನ್ನರ್​ಅಪ್ ಆಗಿ ಹೊರಹೊಮ್ಮಿದ್ದಾರೆ. ಸಿಕ್ಕ ಜನಪ್ರಿಯತೆ ನೋಡಿ ಅವರಿಗೆ ಖುಷಿ ಆಗಿದೆ. ಫೆಬ್ರವರಿ 6ರಂದು ಅವರ ‘ಮಾರಿಗೋಲ್ಡ್’ ಸಿನಿಮಾದ ಟೀಸರ್ ಲಾಂಚ್ ಆಗಿದೆ. ಈ ವೇಳೆ ಅವರು ಟಿವಿ9 ಕನ್ನಡದ ಜೊತೆಗೆ ಮಾತಿಗೆ ಸಿಕ್ಕರು. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಸಂಗೀತಾ (Sangeetha Sringeri) ಅವರು ಶೃಂಗೇರಿಯವರು. ಅಲ್ಲಿಯೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಸಂಗೀತಾ ಅವರು ಶೃಂಗೇರಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಎರಡನೇ ರನ್ನರ್​ಅಪ್ ಆಗಿ ಹೊರಹೊಮ್ಮಿದ್ದಾರೆ. ಸಿಕ್ಕ ಜನಪ್ರಿಯತೆ ನೋಡಿ ಅವರಿಗೆ ಖುಷಿ ಆಗಿದೆ. ಫೆಬ್ರವರಿ 6ರಂದು ಅವರ ನಟನೆಯ ‘ಮಾರಿಗೋಲ್ಡ್’ ಸಿನಿಮಾದ ಟೀಸರ್ ಲಾಂಚ್ ಆಗಿದೆ. ಈ ವೇಳೆ ಅವರು ಟಿವಿ9 ಕನ್ನಡದ ಜೊತೆಗೆ ಮಾತಿಗೆ ಸಿಕ್ಕರು. ‘ನಾನು ಶೃಂಗೇರಿಗೆ ಹೋಗಬೇಕು ಎಂದು ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಅನಿಸುತ್ತಾ ಇತ್ತು. ನನಗೆ ಮಾಧ್ಯಮದವರು ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ, ಅವರ ಜೊತೆ ಮಾತನಾಡಬೇಕು ಎಂಬುದು ನನ್ನ ಮೊದಲ ಕರ್ತವ್ಯ ಆಗಿತ್ತು. ನನ್ನ ಮನಸ್ಸಿನ ಭಾವನೆಯನ್ನು ಅವರು ಜನರಿಗೆ ತಲುಪಿಸಿದ್ದಾರೆ. ಈಗ ಶೃಂಗೇರಿಗೆ ಹೋಗಲೇ ಬೇಕಿದೆ. ನಾನು ಕುಟುಂಬದವರನ್ನು ಭೇಟಿ ಆಗಲು ಹೋಗ್ತಾ ಇದೀನಿ. ಅಭಿಮಾನಿಗಳನ್ನು ಭೇಟಿ ಮಾಡಿ ಬರುತ್ತೇನೆ’ ಎಂದಿದ್ದಾರೆ ಸಂಗೀತಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ