ರಿಲೀಸ್​ಗೂ ಮೊದಲೇ ‘ಒಂದು ಸರಳ ಪ್ರೇಮಕಥೆ’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್; ಪ್ರತಿಕ್ರಿಯಿಸಿದ ಸುನಿ

ರಿಲೀಸ್​ಗೂ ಮೊದಲೇ ‘ಒಂದು ಸರಳ ಪ್ರೇಮಕಥೆ’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್; ಪ್ರತಿಕ್ರಿಯಿಸಿದ ಸುನಿ

ರಾಜೇಶ್ ದುಗ್ಗುಮನೆ
|

Updated on: Feb 07, 2024 | 11:34 AM

‘ಒಂದು ಸರಳ ಪ್ರೇಮಕಥೆ’ ತಂಡ ಬೆಂಗಳೂರಿನಿಂದ ಮೈಸೂರಿಗೆ ರ‍್ಯಾಲಿ ಹೋಗುತ್ತಿದೆ. ಹಳೆಯ ರಸ್ತೆಯಲ್ಲಿ ಸಂಚಾರ ಮಾಡಲಿರುವ ತಂಡ ದಾರಿ ಮಧ್ಯದಲ್ಲಿ ಸಿಗುವ ಎಲ್ಲಾ ಪ್ರಮುಖ ಊರುಗಳಿಗೆ ಭೇಟಿ ನೀಡುವ ಆಲೋಚನೆಯಲ್ಲಿ ಇದೆ. ಈ ಸಿನಿಮಾಗೆ ರಿಲೀಸ್​​ಗೂ ಮೊದಲೇ ದೊಡ್ಮನೆ ಫ್ಯಾನ್ಸ್ ಭರ್ಜರಿ ರೆಸ್ಪಾನ್ಸ್ ಕೊಡುತ್ತಿದ್ದಾರೆ.

ವಿನಯ್ ರಾಜ್​ಕುಮಾರ್ (Vinay Rajkumar) ‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ರಿಲೀಸ್​ಗೆ ರೆಡಿ ಇದೆ. ಫೆಬ್ರವರಿ 9ರಂದು ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ಭರ್ಜರಿ ಪ್ರಮೋಷ್ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಮೈಸೂರಿಗೆ ರ‍್ಯಾಲಿ ಹೋಗುತ್ತಿದೆ. ಹಳೆಯ ರಸ್ತೆಯಲ್ಲಿ ಸಂಚಾರ ಮಾಡಲಿರುವ ತಂಡ ದಾರಿ ಮಧ್ಯದಲ್ಲಿ ಸಿಗುವ ಎಲ್ಲಾ ಪ್ರಮುಖ ಊರುಗಳಿಗೆ ಭೇಟಿ ನೀಡಲಿದೆ. ಈ ಸಿನಿಮಾಗೆ ರಿಲೀಸ್​​ಗೂ ಮೊದಲೇ ದೊಡ್ಮನೆ ಫ್ಯಾನ್ಸ್ ಕಡೆಯಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇದರಿಂದ ಗೆಲ್ಲುವ ಭರವಸೆಯಲ್ಲಿ ಅವರಿದ್ದಾರೆ. ಲವ್​ಸ್ಟೋರಿಗಳನ್ನು ಸುಂದರವಾಗಿ ಕಟ್ಟಿಕೊಡುತ್ತಾರೆ ಸುನಿ. ಹೀಗಾಗಿ, ‘ಒಂದು ಸರಳ ಪ್ರೇಮಕಥೆ’ ಬಗ್ಗೆ ನಿರೀಕ್ಷೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ