‘ಬಿಗ್ ಬಾಸ್’ ವಿನ್ನರ್​ಗೆ ಇದೆಂಥಾ ಸ್ಥಿತಿ; ಭಿಕ್ಷೆ ಬೇಡುತ್ತಿರುವ ಇವರಿಗೆ ಮೈಮೇಲೆಲ್ಲ ಗುಳ್ಳೆ

ಈ ವಿಡಿಯೋದಲ್ಲಿ ಇರುವ ವ್ಯಕ್ತಿಯ ಮುಖಕ್ಕೆ ದೊಡ್ಡ ಗುಳ್ಳೆಗಳು ಇವೆ. ಅನೇಕ ಜನರು ನಟನ ಮುಖವನ್ನು ನೋಡಿ ಹೆದರಿದ್ದಾರೆ. ಅನೇಕರು ಓಡಿಹೋಗಿದ್ದಾರೆ. ಆದರೆ ರಿಕ್ಷಾ ಚಾಲಕನು ನಟನಿಗೆ ಧನ ಸಹಾಯ ಮಾಡಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಬಿಗ್ ಬಾಸ್’ ವಿನ್ನರ್​ಗೆ ಇದೆಂಥಾ ಸ್ಥಿತಿ; ಭಿಕ್ಷೆ ಬೇಡುತ್ತಿರುವ ಇವರಿಗೆ ಮೈಮೇಲೆಲ್ಲ ಗುಳ್ಳೆ
ಶಿವ ಠಾಕ್ರೆ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 06, 2024 | 1:45 PM

ಅನೇಕ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಅದರಲ್ಲೂ ಪ್ರ್ಯಾಂಕ್ ವಿಡಿಯೋಗಳು ಸಾಕಷ್ಟು ಸೆಲ್ ಆಗುತ್ತವೆ. ಇದನ್ನು ಯಾವುದೋ ಯೂಟ್ಯೂಬರ್ (YouTuber) ಮಾಡಿದರೆ ಸಾಮಾನ್ಯ ಎನ್ನಬಹುದು. ಆದರೆ, ಸಾಕಷ್ಟು ಜನಪ್ರಿಯತೆ ಪಡೆದವರೇ ಹೀಗೆ ಮಾಡಿದರೆ ಫ್ಯಾನ್ಸ್​ಗೆ ಶಾಕ್ ಆಗೋದು ಗ್ಯಾರಂಟಿ. ಈಗಲೂ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನಂತರ ಅನೇಕರಿಗೆ ಶಾಕ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡು ಬಂದಿದೆ. ಈ ರೀತಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವ ವ್ಯಕ್ತಿ ಪ್ರಸಿದ್ಧ ಮತ್ತು ಜನಪ್ರಿಯ ಸೆಲೆಬ್ರಿಟಿ. ಅವರನ್ನು ನೋಡಿ ರಸ್ತೆಯಲ್ಲಿ ಓಡಾಡುವ ಜನರು ಭಯಗೊಂಡಿದ್ದಾರೆ ಈ ವಿಡಿಯೋ ವೈರಲ್ ಆಗಿ ಚರ್ಚೆ ಆಗುತ್ತಿದೆ.

ವಿಡಿಯೋದಲ್ಲಿ ಇರುವ ವ್ಯಕ್ತಿಯ ಮುಖಕ್ಕೆ ದೊಡ್ಡ ಗುಳ್ಳೆಗಳಿವೆ. ಅನೇಕ ಜನರು ನಟನ ಮುಖವನ್ನು ನೋಡಿ ಹೆದರಿದ್ದಾರೆ, ಅನೇಕರು ಓಡಿಹೋಗಿದ್ದಾರೆ. ಆದರೆ ರಿಕ್ಷಾ ಚಾಲಕನು ನಟನಿಗೆ ಧನ ಸಹಾಯ ಮಾಡಿದರು. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ನಟ ಬೇರೆ ಯಾರೂ ಅಲ್ಲ, ‘ಬಿಗ್ ಬಾಸ್ ಮರಾಠಿ ಸೀಸನ್ 2’ನ ವಿನ್ನರ್ ಜನಪ್ರಿಯ ನಟ ಶಿವ್ ಠಾಕ್ರೆ.

ಶಿವ್ ಠಾಕ್ರೆ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ಮಾಡಿರೋ ಪ್ರ್ಯಾಂಕ್ ವಿಡಿಯೋ ಯಶಸ್ವಿಯಾಗಿದೆ. ಕೆಲವರು ನೆಚ್ಚಿನ ನಟ ಎದುರಿಗೆ ಬಂದರೂ ಗುರುತಿಸಲಾಗಲೇ ಇಲ್ಲವಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಇದು ಸರಿ ಅಲ್ಲ ಎಂದಿದ್ದಾರೆ. ಇದರ ಮೇಕಿಂಗ್ ವಿಡಿಯೋನ ಅವರು ಹಂಚಿಕೊಂಡಿದ್ದಾರೆ.

ಶಿವ್ ಠಾಕ್ರೆ ವಿಡಿಯೋ..

View this post on Instagram

A post shared by Shiv Thakare (@shivthakare9)

ಶಿವ್ ಠಾಕ್ರೆ ವಿಡಿಯೋದಲ್ಲಿ ಕಂಡ ಆಟೋ ಚಾಲಕನ ಎಲ್ಲರೂ ಹೊಗಳುತ್ತಿದ್ದಾರೆ. ‘ರಿಕ್ಷಾ ಚಾಲಕ ನಮ್ಮ ಹೃದಯವನ್ನು ಗೆದ್ದಿದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಶಿವ್ ಇದೇನು ಇಂತಹ ಲುಕ್’ ಎಂದು ಕೆಲವರು ಹೇಳಿದ್ದಾರೆ. ಸದ್ಯ ಶಿವ್ ಠಾಕ್ರೆ ಅವರ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಶಿವ್ ಅಭಿಮಾನಿ ಬಳಗ ದೊಡ್ಡದಿದೆ. ಹಿಂದಿ ಮಂದಿಗೂ ಅವರು ಚಿರಪರಿಚಿತರಾಗಿದ್ದಾರೆ. ‘ಹಿಂದಿ ಬಿಗ್ ಬಾಸ್ ಸೀಸನ್ 16’ರ ಮೊದಲ ರನ್ನರ್ ಅಪ್ ಆಗಿದ್ದರು. ಎಂಸಿ ಸ್ಟಾನ್ ಅವರು ಈ ಸೀಸನ್ ಗೆದ್ದಿದ್ದಾರೆ.

ಇದನ್ನೂ ಓದಿ: ಶೀಘ್ರವೇ ಬರಲಿದೆ ‘ಬಿಗ್ ಬಾಸ್ ಕನ್ನಡ’ ಒಟಿಟಿ ಸೀಸನ್? ಹುಟ್ಟಿದೆ ಹೀಗೊಂದು ಸುದ್ದಿ

ಶಿವ್ ಅವರು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದವರು. 2017ರಲ್ಲಿ ‘ಎಂಟಿವಿ ರೋಡೀಸ್ ರೈಸಿಂಗ್’ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಆ ಬಳಿಕ 2019ರಲ್ಲಿ ‘ಬಿಗ್ ಬಾಸ್’ ಮರಾಠಿ ಸೀಸನ್​ಗೆ ಬಂದು ಕಪ್ ಗೆದ್ದರು. 2022ರಲ್ಲಿ ಹಿಂದಿ ಬಿಗ್ ಬಾಸ್​ಗೆ ಬಂದರು. 2023ರಲ್ಲಿ ‘ಫಿಯರ್ ಫ್ಯಾಕ್ಟರ್: ಖತ್ರೋಂಕಿ ಖಿಲಾಡಿ ಸೀಸನ್ 13’ರಲ್ಲಿ ಸ್ಪರ್ಧಿಸಿದರು. ‘ಝಲಕ್ ದಿಕ್ಲಾ ಜಾ ಸೀಸನ್ 11’ರಲ್ಲಿಯೂ ಅವರು ಸ್ಪರ್ಧಿಸಿದ್ದರು. ಇದರ ಜೊತೆಗೆ ಹಲವು ಶೋಗಳಿಗೆ ಅತಿಥಿಯಾಗಿ ಆಗಮಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ