Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರವೇ ಬರಲಿದೆ ‘ಬಿಗ್ ಬಾಸ್ ಕನ್ನಡ’ ಒಟಿಟಿ ಸೀಸನ್? ಹುಟ್ಟಿದೆ ಹೀಗೊಂದು ಸುದ್ದಿ

‘ಬಿಗ್ ಬಾಸ್ ಕನ್ನಡ ಸೀಸನ್ 10’ ಈಗಾಗಲೇ ಪೂರ್ಣಗೊಂಡಿದೆ. ಈ ಸೀಸನ್ ಯಶಸ್ಸು ಕಂಡಿದೆ. ಕಾರ್ತಿಕ್ ಮಹೇಶ್ ಅವರು ಗೆಲುವು ಕಂಡಿದ್ದಾರೆ. ಡ್ರೋನ್ ಪ್ರತಾಪ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಈ ಶೋ ಮುಗಿದ ಬಳಿಕ ಬಿಗ್ ಬಾಸ್ ಮನೆಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆಯಂತೆ. 

ಶೀಘ್ರವೇ ಬರಲಿದೆ ‘ಬಿಗ್ ಬಾಸ್ ಕನ್ನಡ’ ಒಟಿಟಿ ಸೀಸನ್? ಹುಟ್ಟಿದೆ ಹೀಗೊಂದು ಸುದ್ದಿ
ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Feb 05, 2024 | 9:27 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಪೂರ್ಣಗೊಂಡಿದೆ. ಉಳಿದ ಸೀಸನ್​ಗಳಿಗೆ ಹೋಲಿಕೆ ಮಾಡಿದರೆ ಈ ಸೀಸನ್ ಭರ್ಜರಿ ಟಿಆರ್​ಪಿ ಪಡೆದುಕೊಂಡಿದೆ. ಎಲ್ಲ ಕಡೆಗಳಿಂದ ಈ ಸೀಸನ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಖುಷಿಯಲ್ಲಿ ‘ಬಿಗ್ ಬಾಸ್ ಒಟಿಟಿ’ ಸೀಸನ್ ಆರಂಭಿಸಲು ವಾಹಿನಿಯವರು ಚಿಂತನೆ ನಡೆಸಿದ್ದಾರೆ ಎಂದು ವರದಿ ಆಗಿದೆ. 40 ದಿನಗಳ ಒಟಿಟಿ ಸೀಸನ್ ಬಂದರೆ ಯಾರೆಲ್ಲ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಕಳೆದ ವರ್ಷ ಅಂದರೆ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭಕ್ಕೂ ಮೊದಲು ಒಟಿಟಿ ಸೀಸನ್ ಪ್ರಸಾರ ಕಂಡಿತ್ತು. ಸೋನು ಗೌಡ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ ಸೇರಿ ಅನೇಕರು ಒಟಿಟಿ ಸೀಸನ್​ಗೆ ಸ್ಪರ್ಧಿಗಳಾಗಿ ಬಂದಿದ್ದರು. ಈ ಒಟಿಟಿ ಸೀಸನ್ ಮುಗಿದ ಬಳಿಕ ಟಿವಿ ಸೀಸನ್ ಆರಂಭಿಸಲಾಯಿತು. ಈ ಬಾರಿ ಬೇರೆಯದೇ ಪ್ಯಾಟರ್ನ್ ಅನುಸರಿಸಲಾಗುತ್ತಿದೆ ಎನ್ನಲಾಗಿದೆ.

ಈಗಾಗಲೇ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಪೂರ್ಣಗೊಂಡಿದೆ. ಈ ಸೀಸನ್ ಯಶಸ್ವಿ ಆಗಿದೆ. ಕಾರ್ತಿಕ್ ಮಹೇಶ್ ಅವರು ಗೆದ್ದು ಬೀಗಿದರೆ, ಡ್ರೋನ್ ಪ್ರತಾಪ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಈ ಶೋ ಮುಗಿದ ಬಳಿಕ ಬಿಗ್ ಬಾಸ್ ಮನೆಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆಯಂತೆ. ಹೀಗಾಗಿ, ಒಟಿಟಿ ಸೀಸನ್ ಆರಂಭ ಆಗಬಹುದು ಎಂದು ಅನೇಕರು ಊಹಿಸಿದ್ದಾರೆ.

ಹಾಗಾದರೆ, ಒಟಿಟಿ ಸೀಸನ್ ಬರೋದು ಪಕ್ಕಾನಾ? ಜಿಯೋ ಸಿನಿಮಾ ಮೂಲಗಳ ಪ್ರಕಾರ ಇನ್ನೂ ಯಾವುದೂ ಅಂತಿಮ ಆಗಿಲ್ಲ. ಸದ್ಯ ಎಲ್ಲವೂ ಮಾತುಕತೆ ಹಂತದಲ್ಲಿದೆ ಎನ್ನಲಾಗಿದೆ. ಒಟಿಟಿ ಸೀಸನ್ ಆರಂಭಿಸಬೇಕಾದರೆ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಅವರ ಕಾಲ್​ಶೀಟ್ ಬೇಕು. ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ‘ಸಿಸಿಎಲ್ ಸೀಸನ್ 10’ರಲ್ಲಿ ಅವರು ಆಟ ಆಡಲಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಗಮನಿಸಬೇಕಾಗುತ್ತದೆ. ಒಟಿಟಿ ಸೀಸನ್ ಬರುವುದು ನಿಜವೇ ಆದಲ್ಲಿ ಶೀಘ್ರವೇ ಜಿಯೋ ಸಿನಿಮಾ ಕಡೆಯಿಂದ ಈ ಬಗ್ಗೆ ಶೀಘ್ರವೇ ಅಧಿಕೃತ ಮಾಹಿತಿ ಸಿಗಲಿದೆ.

ಇದನ್ನೂ ಓದಿ: ‘ಬಿಗ್ ಬಾಸ್ ಮನೆ ಈಗಲೂ ನಮ್ಮನ್ನು ಕಾಡುತ್ತದೆ’; ಹೊರಗೆ ಬಂದು ಅನುಭವ ಹೇಳಿಕೊಂಡ ಸಂಗೀತಾ ಶೃಂಗೇರಿ

ಕಳೆದ ಒಟಿಟಿ ಸೀಸನ್​ನಲ್ಲಿ ವಿನ್ನರ್ ಎಂದು ಯಾರನ್ನೂ ಘೋಷಣೆ ಮಾಡಿರಲಿಲ್ಲ. ಬದಲಿಗೆ ರೂಪೇಶ್ ಶೆಟ್ಟಿಗೆ ಮೊದಲ ಸ್ಥಾನ ನೀಡಲಾಗಿತ್ತು. ಟಾಪ್ ನಾಲ್ಕ ಮಂದಿಯನ್ನು ಟಿವಿ ಸೀಸನ್​ಗೆ ಕಳುಹಿಸಲಾಯಿತು. ಆದರೆ, ಈಗಾಗಲೇ ಟಿವಿ ಸೀಸನ್ ಪೂರ್ಣಗೊಂಡಿದೆ. ಹೀಗಾಗಿ, ಒಟಿಟಿ ಸೀಸನ್​ನಲ್ಲಿ ವಿನ್ನರ್ ಹಾಗೂ ರನ್ನರ್​ಅಪ್ ಇರೋ ಸಾಧ್ಯತೆ ಇದೆ. ಇದು ಕೇವಲ 40 ದಿನಗಳ ಶೋ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ರೂಪೇಶ್ ಶೆಟ್ಟಿಗೆ 5 ಲಕ್ಷ ರೂಪಾಯಿ ನೀಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:54 am, Mon, 5 February 24