ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಸಿದ್ದರಾಮಯ್ಯ ಗೈರಾಗಿದ್ದರೆ ಜಮೀರ್, ಡಿಕೆ ಶಿವಕುಮಾರ ಮತ್ತು ಡಿಕೆ ಸುರೇಶ್ ನಡುವೆ ಕೂತುಬಿಟ್ಟರು!!
ಸಿದ್ದರಾಮಯ್ಯನವರ ಪಟ್ಟದ ಶಿಷ್ಯನಂತೆ ಆಡುವ ಜಮೀರ್ ಅಹ್ಮದ್ ಅವರು ಶಿವಕುಮಾರ್ ಮತ್ತು ಸುರೇಶ್ ಮಧ್ಯೆ ಸಿಕ್ಹಾಕಿಕೊಂಡಿದ್ದಾರೆ. ಹಿಜಾಬ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ತಮ್ಮ ಪಕ್ಷದ ನಾಯಕರಿಂದಲೇ ಉಗಿಸಿಕೊಂಡ ಜಮೀರ್ ಕಾಂಗ್ರೆಸ್ ಪಕ್ಷ ಸೇರಿದಾಗಿನಿಂದಲೂ ಶಿವಕುಮಾರ್ ಆಪ್ತವಲಯದಲ್ಲಿ ಕಾಣಿಸಿಕೊಂಡಿಲ್ಲ.
ಗುರುವಾರ ಬೆಳಗ್ಗೆ ವಿಧಾನಸಭೆಯ ಕಲಾಪ ಮುಂದೂಡಲ್ಪಟ್ಟ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ (KPCC) ಡಿಕೆ ಶಿವಕುಮಾರ್ (DK Shivakumar) ಆವರು ಒಂದು ಸಭೆಯನ್ನು ನಡೆಸಿದರು. ಕಾಂಗ್ರೆಸ್ ಶಾಸಕರು ಶಿವಕುಮಾರ್ ಅವರ ಕೋಣೆಯಲ್ಲಿ ಸೇರಿರುವುದು ವಿಡಿಯೋನಲ್ಲಿ ಕಾಣುತ್ತದೆ. ಆದರೆ ಒಬ್ಬ ಕಾಂಗ್ರೆಸ್ ನಾಯಕನ ಗೈರು ಹಾಜರಿ ಎದ್ದುಕಾಣುತ್ತಿದೆ. ಎಲ್ಲರೂ ಇದ್ದಾರೆ ಆದರೆ, ವಿರೋದ ಪಕ್ಷದ ನಾಯಕ ಮತ್ತು ಪಕ್ಷದ ಹಿರಿಯ ಧುರೀಣ ಸಿದ್ದರಾಮಯ್ಯ (Siddaramaiah) ಮಾತ್ರ ಕಾಣುತ್ತಿಲ್ಲ. ಪ್ರಾಯಶಃ ಅವರು ಬರಲಿ ಅಂತ ಶಿವಕುಮಾರ್ ಸೇರಿದಂತೆ ಎಲ್ಲರೂ ಕಾಯುತ್ತಿದ್ದಾರೆ. ಅವರು ಬರುವ ಲಕ್ಷಣ ಕಾಣದೆ ಹೋದಾಗ ಮೀಟಿಂಗ್ ಶುರುಮಾಡುವ ದ್ಯೋತಕವಾಗಿ ಡಿಕೆಶಿ ಅವರು ಕೋಣೆಯೊಳಗೆ ಬಂದಿರುವ ಮಾಧ್ಯಮಗಳ ಕೆಮೆರಾಮನ್ಗಳನ್ನು ಹೊರಗೆ ಹೋಗಲು ಹೇಳುತ್ತಿದ್ದಾರೆ. ಈ ಮೀಟಿಂಗ್ನಲ್ಲಿ ಶಿವಕುಮಾರ ಸಹೋದರ ಸಂಸದ ಡಿಕೆ ಸುರೇಶ್ ಸಹ ಪಾಲ್ಗೊಂಡಿದ್ದಾರೆ.
ಈ ವಿಡಿಯೋದ ಒಂದು ಗಮ್ಮತ್ತನ್ನು ಗಮನಿಸಿ. ಸಿದ್ದರಾಮಯ್ಯನವರ ಪಟ್ಟದ ಶಿಷ್ಯನಂತೆ ಆಡುವ ಜಮೀರ್ ಅಹ್ಮದ್ ಅವರು ಶಿವಕುಮಾರ್ ಮತ್ತು ಸುರೇಶ್ ಮಧ್ಯೆ ಸಿಕ್ಹಾಕಿಕೊಂಡಿದ್ದಾರೆ. ಹಿಜಾಬ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ತಮ್ಮ ಪಕ್ಷದ ನಾಯಕರಿಂದಲೇ ಉಗಿಸಿಕೊಂಡ ಜಮೀರ್ ಕಾಂಗ್ರೆಸ್ ಪಕ್ಷ ಸೇರಿದಾಗಿನಿಂದಲೂ ಶಿವಕುಮಾರ್ ಆಪ್ತವಲಯದಲ್ಲಿ ಕಾಣಿಸಿಕೊಂಡಿಲ್ಲ. ತಮ್ಮ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಸಿದ್ದರಾಮಯಯ್ಯನವರೇ ಮುಖ್ಯಮಂತ್ರಿ ಆಗಬೇಕು ಅಂತೆಲ್ಲ ಹೇಳಿಕೆಗಳನ್ನು ನೀಡುತ್ತಾ ಶಿವಕುಮಾರ್ ಅವರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.
ಇಂಥ ಜಮೀರ ಇಂದು ಅಣ್ಣತಮ್ಮಂದಿರ ನಡುವೆ ತಿಳಿದೋ ತಿಳಿಯದೋ ಕೂತು ಬಿಟ್ಟಿದ್ದಾರೆ. ಮೀಟಿಂಗ್ ಮುಗಿಯುವರೆಗೆ ಅವರು ಬೆಂಕಿಯ ಮೇಲೆ ಕೂತಂತೆ ಅಡಿರುತ್ತಾರೆ ಅನ್ನೋಂತೂ ದಿಟ. ಸಿದ್ದರಾಮಯ್ಯ ಇದ್ದಿದ್ದರೆ ಅವರು ಸ್ವಲ್ಪ ನಿರಾಳರಾಗಿರುತ್ತಿದ್ದರು ಅನ್ನೋದು ಸುಳ್ಳಲ್ಲ ಮಾರಾಯ್ರೇ.
ಇದನ್ನೂ ಓದಿ: ಜಮೀರ್ ಅಹ್ಮದ್ ತಮ್ಮ ಬುದ್ಧಿ ಮೇಲೆ ಬಿದ್ದಿರುವ ಹಿಜಾಬ್ ಮೊದಲು ತೆಗೆಯಲಿ ಅಂದರು ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್