ಬೆಂಗಳೂರಲ್ಲಿ ನಿಗೂಢ ಸ್ಫೋಟ: ರಾಮೇಶ್ವರಂ ಕೆಫೆಯಲ್ಲಿ ಇದಕ್ಕೂ ಮೊದಲು ಸಹ ಸ್ಫೋಟಕಗಳನ್ನಿಡುವ ಪ್ರಯತ್ನ ನಡೆದಿತ್ತೇ?

|

Updated on: Mar 01, 2024 | 5:09 PM

ಇದಕ್ಕೆ ಮೊದಲು ಕೂಡ ಯಾರೋ ಅಪರಿಚಿತರು, ಎರಡು ಬ್ಯಾಗ್ ಗಳನ್ನು ತಂದು ಒಂದನ್ನು ಅದೇ ವಾಷ್ ಬೇಸಿನ್ ಬಳಿ ಮತ್ತೊಂದನ್ನು ಜನನ ಓಡಾಟ ಕಡಿಮೆಯಿರುವ ಸ್ಥಳದಲ್ಲಿ ಇರಿಸಿ ಹೋಗಿದ್ದರಂತೆ, ಪೊಲೀಸರು ಬಂದು ಪರಿಶೀಲಿಸಿದಾಗ ಒಂದು ಬ್ಯಾಗಲ್ಲಿ ಒಡೆದ ಮಡಕೆ ಚೂರುಗಳಿದ್ದವಂತೆ ಹಾಗೂ ಪೊಲೀಸರು ಅಲ್ಲಿಂದ ತೆಗೆದುಕೊಂಡು ಹೋದ ಇನ್ನೊಂದು ಬ್ಯಾಗಲ್ಲಿ ಏನಿತ್ತು ಅನ್ನೋದು ಗೋತ್ತಾಗಿಲ್ಲವಂತೆ

ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameswaram Café) ಇಂದು ಮಧ್ಯಾಹ್ನ ಸುಮಾರು 1.30 ಕ್ಕೆ ಸಂಭವಿಸಿರುವ ನಿಗೂಢ ಸ್ಫೋಟ (explosion) ನಗರದ ನಿವಾಸಿಗಳನ್ನು ಆತಂಕಕ್ಕೆ ದೂಡಿದೆ. ಸ್ಪೋಟ ಹೇಗಾಯಿತು, ಸ್ಪೋಟಗೊಂಡ ವಸ್ತು ಏನು ಅನ್ನೋದು ಇನ್ನೂ ಗೊತ್ತಾಗಬೇಕಿದೆ. ಸ್ಥಳಕ್ಕೆ ಡಾಗ್ ಸ್ಕ್ವ್ಯಾಡ್ (dog squad) ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಆಗಮಿಸಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಗೃಹ ಇಲಾಖೆಯಿಂದ ಹೇಳಿಕೆ ಇನ್ನೂ ಬಂದಿಲ್ಲ. ಬೆಂಗಳೂರು ನಗರ ಪೊಲೀಸ್ ಕಮೀಶನರ್ ಬಿ ದಯಾನಂದ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆಫೆಯ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಹೇಳುವ ಹಾಗೆ, ಅಪರಿಚಿತಱರೋ ಕೆಫೆಯ ವಾಷ್ ಬೇಸಿನ್ ಒಂದು ಬಳಿ ಬ್ಯಾಗ್ ಇಟ್ಟು ಹೋಗಿದ್ದರಂತೆ, ಬ್ಯಾಗ್ ಇರಿಸಿದ್ದ ಸ್ಥಳದಲ್ಲೇ ಸ್ಫೋಟವಾಗಿದೆ. ಭಾರೀ ಸ್ಫೋಟದ ಸದ್ದನ್ನು ಸುತ್ತಮುತ್ತಲಿನ ಜನ ಕೇಳಿಸಿಕೊಂಡಿದ್ದಾರೆ.

ಮೊದಲಿಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿತ್ತು ಅದರೆ ಎಕ್ಸ್ ಪ್ಲೋಡ್ ಅಗಿದ್ದು ಸಿಲಿಂಡರ್ ಅಲ್ಲವೆಂದು ದಿವ್ಯಾ ಸ್ಪಷ್ಟಪಡಿಸಿದ್ದಾರೆ. ಸ್ಪೋಟದಲ್ಲಿ ಕೆಫೆಯ ಸಿಬ್ಬಂದಿ ಪೈಕಿ ಮೂವರು ಮತ್ತು ನಾಲ್ವರು ಗ್ರಾಹಕರು ಗಾಯಗೊಂಡಿದ್ದು ಅವರೆಲ್ಲರಿಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇದಕ್ಕೆ ಮೊದಲು ಕೂಡ ಯಾರೋ ಅಪರಿಚಿತರು, ಎರಡು ಬ್ಯಾಗ್ ಗಳನ್ನು ತಂದು ಒಂದನ್ನು ಅದೇ ವಾಷ್ ಬೇಸಿನ್ ಬಳಿ ಮತ್ತೊಂದನ್ನು ಜನನ ಓಡಾಟ ಕಡಿಮೆಯಿರುವ ಸ್ಥಳದಲ್ಲಿ ಇರಿಸಿ ಹೋಗಿದ್ದರಂತೆ, ಪೊಲೀಸರು ಬಂದು ಪರಿಶೀಲಿಸಿದಾಗ ಒಂದು ಬ್ಯಾಗಲ್ಲಿ ಒಡೆದ ಮಡಕೆ ಚೂರುಗಳಿದ್ದವಂತೆ ಹಾಗೂ ಪೊಲೀಸರು ಅಲ್ಲಿಂದ ತೆಗೆದುಕೊಂಡು ಹೋದ ಇನ್ನೊಂದು ಬ್ಯಾಗಲ್ಲಿ ಏನಿತ್ತು ಅನ್ನೋದು ಗೋತ್ತಾಗಿಲ್ಲವಂತೆ. ಎಲ್ಲ ನಿಗೂಢವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಂಗಳೂರು: ಸಿಲಿಂಡರ್ ಸ್ಪೋಟಗೊಂಡು 7 ಮಂದಿಗೆ ಗಾಯ, ಐದು ಮನೆಗಳಿಗೆ‌ ಹಾನಿ

Follow us on