ಸರ್ಕಾರ ಯಾವುದೇ ಆಗಿರಲಿ ಸಂಸತ್ತಿನಲ್ಲಿ ರಾಜ್ಯದ ಪರ ಧ್ವನಿಯೆತ್ತುವ ಸಂಸದರು ಬೇಕು: ಬಿಜೆಡ್ ಜಮೀರ್ ಆಹ್ಮದ್ ಖಾನ್

ಸರ್ಕಾರ ಯಾವುದೇ ಆಗಿರಲಿ ಸಂಸತ್ತಿನಲ್ಲಿ ರಾಜ್ಯದ ಪರ ಧ್ವನಿಯೆತ್ತುವ ಸಂಸದರು ಬೇಕು: ಬಿಜೆಡ್ ಜಮೀರ್ ಆಹ್ಮದ್ ಖಾನ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 01, 2024 | 5:57 PM

ಕಾಂಗ್ರೆಸ್ ಪಕ್ಷದಿಂದ ಕೇವಲ ಒಬ್ಬ ಸಂಸದ ಇರೋದ್ರಿಂದ ಅವರಿಗೆ ಮಾತಾಡುವ ಅವಕಾಶ ಕೊಡುತ್ತಿಲ್ಲ, ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ಪಕ್ಷದ ಸಂಸದ ಸೇರಿ 27 ಸದಸ್ಯರು ಸಂಸತ್ತಿನಲ್ಲಿದ್ದರೂ ರಾಜ್ಯದ ಪರ ಧ್ವನಿ ಎತ್ತಲ್ಲ ಎಂದರು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಆ ಪಕ್ಷಕ್ಕಿಂತ ಒಂದು ಹಂತ ಮೇಲೆ ಹೋಗಿದ್ದು ಬೇರೆ ವಿಷಯಗಳ ಬಗ್ಗೆ ಧ್ವನಿಯೆತ್ತುತ್ತಾರೆ, ಕರ್ನಾಟಕ ಜನತೆ ಪರ ಎತ್ತಲ್ಲ ಎಂದು ಜಮೀರ್ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan), ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Polls) ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟಕ್ಕೆ ಬಹುಮತ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಮುಸಲ್ಮಾನರ ಸಂಖ್ಯೆ (Muslim population) 70 ಲಕ್ಷ ಎಂದು ಹೇಳಲಾಗುತ್ತಿದ್ದು ಆ ಆಧಾರದಲ್ಲಿ ಹೆಚ್ಚಿನ ಸ್ಥಾನಗಳನ್ನು ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ನೀಡಬೇಕೆಂದು ಬೇಡಿಕೆ ಸಲ್ಲಿಸಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್ ಖಾನ್, ಶೇಕಡಾವಾರು ಅಂತೇನಿಲ್ಲ, ಆದರೆ ಬೆಂಗಳೂರು ಕೇಂದ್ರ, ಬೀದರ್ ಮತ್ತು ಹಾವೇರಿ ಕ್ಷೇತ್ರಗಳನ್ನು ನೀಡುವಂತೆ ಕೋರಿದ್ದೇವೆ, ಆದಾಗ್ಯೂ ಹೈ ಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ ಎಂದು ಹೇಳಿದರು.

ಸರ್ಕಾರ ಯಾವುದೇ ಆಗಿರಲಿ, ಸಂಸತ್ತಿನಲ್ಲಿ ರಾಜ್ಯದ ಪರ ಧ್ವನಿಯೆತ್ತುವವರ ಸಂಖ್ಯೆ ಹೆಚ್ಚಿರಬೇಕು, ಸದ್ಯದ ಸ್ಥಿತಿ ನೋಡಿ; ಕಾಂಗ್ರೆಸ್ ಪಕ್ಷದಿಂದ ಕೇವಲ ಒಬ್ಬ ಸಂಸದ ಇರೋದ್ರಿಂದ ಅವರಿಗೆ ಮಾತಾಡುವ ಅವಕಾಶ ಕೊಡುತ್ತಿಲ್ಲ, ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ಪಕ್ಷದ ಸಂಸದ ಸೇರಿ 27 ಸದಸ್ಯರು ಸಂಸತ್ತಿನಲ್ಲಿದ್ದರೂ ರಾಜ್ಯದ ಪರ ಧ್ವನಿ ಎತ್ತಲ್ಲ ಎಂದರು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಆ ಪಕ್ಷಕ್ಕಿಂತ ಒಂದು ಹಂತ ಮೇಲೆ ಹೋಗಿದ್ದು ಬೇರೆ ವಿಷಯಗಳ ಬಗ್ಗೆ ಧ್ವನಿಯೆತ್ತುತ್ತಾರೆ, ಕರ್ನಾಟಕ ಜನತೆ ಪರ ಎತ್ತಲ್ಲ ಎಂದು ಜಮೀರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Lok Sabha polls: 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ, ಮೈನ್‌ಪುರಿಯಿಂದ ಡಿಂಪಲ್ ಯಾದವ್ ಸ್ಪರ್ಧೆ