Karnataka Assembly Polls; ನಾಮಪತ್ರ ಸಲ್ಲಿಸಲು ಅಗತ್ಯವಿರುವ ದಾಖಲೆಪತ್ರಗಳನ್ನು ಸಿದ್ಧಮಾಡಿಟ್ಟುಕೊಳ್ಳುವಂತೆ ಹೈಕಮಾಂಡ್ ಸೂಚನೆ ನೀಡಿದೆ: ಡಿಕೆ ಸುರೇಶ್
ಹೈಕಮಾಂಡ್ ನಿಂದ ಆದೇಶ ಬಂದರೆ, ಪಕ್ಷದ ಪರವಾಗಿ ಈಗಾಗಲೇ ನಾಮಪತ್ರ ಸಲ್ಲಿಸಿರುವ ರಘುನಾಥ್ ನಾಯ್ಡು ಹಿಂದೆ ಸರಿಯುವುದಾಗಿ ಹೇಳಿದ್ದಾರೆ, ಎಂದು ಸುರೇಶ್ ಪತ್ರಕರ್ತರಿಗೆ ತಿಳಿಸಿದರು.
ಬೆಂಗಳೂರು: ಸಂಸದ ಡಿಕೆ ಸುರೇಶ್ (DK Suresh) ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ (R Ashoka) ಅವರ ವಿರುದ್ಧ ಕಣಕ್ಕಳಿಯುವುದು ಕ್ರಮೇಣ ಖಚಿತವಾಗುತ್ತಿದೆ. ಬೆಂಗಳೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುರೇಶ್ ನಾಮಪತ್ರ ಸಲ್ಲಿಸುವಾಗ ಅಗತ್ಯವಿರುವ ಎಲ್ಲ ದಾಖಲೆ ಪತ್ರಗಳನ್ನು ಸಿದ್ಧಮಾಡಿಟ್ಟುಕೊಳ್ಳುವಂತೆ ಹೈಕಮಾಂಡ್ ಸೂಚನೆ ನೀಡಿದೆ, ರಾಹುಲ್ ಗಾಂಧಿ (Rahul Gandhi) ಮತ್ತು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನಾಮಪತ್ರ ಸಲ್ಲಿಸುವಂತೆ ಆದೇಶ ನೀಡಿದರೆ ಖಂಡಿತ ಸಲ್ಲಿಸುವುದಾಗಿ ಸುರೇಶ್ ಹೇಳಿದರು. ಹೈಕಮಾಂಡ್ ನಿಂದ ಆದೇಶ ಬಂದರೆ, ಪಕ್ಷದ ಪರವಾಗಿ ಈಗಾಗಲೇ ನಾಮಪತ್ರ ಸಲ್ಲಿಸಿರುವ ರಘುನಾಥ್ ನಾಯ್ಡು ಹಿಂದೆ ಸರಿಯುವುದಾಗಿ ಹೇಳಿದ್ದಾರೆ, ಎಂದು ಸುರೇಶ್ ಪತ್ರಕರ್ತರಿಗೆ ತಿಳಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 19, 2023 02:39 PM