ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಕೇಂದ್ರ ಪ್ರವಾಹ ತಂಡದ ಅಧಿಕಾರಿಗಳು
ಬೆಳಗಾವಿಯ ಕಣಕುಂಬಿ ಭಾಗದಲ್ಲಿ ಸತತ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರ ಪ್ರವಾಹ ತಂಡ ಭೇಟಿ ನೀಡಿದ್ದು, ಸತತ ಮಳೆಯಲ್ಲೂ ಸಹ ಖುದ್ದು ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಆದರೆ, ಜಿಗಣೆ ಕಾಟಕ್ಕೆ ಅಧಿಕಾರಿಗಳು ಹೈರಾಣಾಗಿದ್ದಾರೆ.
ಬೆಳಗಾವಿ, ಜು.07: ರಾಜ್ಯಾದ್ಯಂತ ಭರ್ಜರಿ ಮಳೆ ಆಗುತ್ತಿದ್ದು, ಬೆಳಗಾವಿಯ ಕಣಕುಂಬಿ ಭಾಗದಲ್ಲಿ ಸತತ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರ ಪ್ರವಾಹ ತಂಡ ಭೇಟಿ ನೀಡಿದ್ದು, ಸತತ ಮಳೆಯಲ್ಲೂ ಸಹ ಖುದ್ದು ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಆದರೆ, ಜಿಗಣೆ ಕಾಟಕ್ಕೆ ಅಧಿಕಾರಿಗಳು ಹೈರಾಣಾಗಿದ್ದಾರೆ. ಇನ್ನು ತಂಡದ ಸದಸ್ಯರಿಗೆ ಛತ್ರಿ ಹಾಗೂ ಗಮ್ ಶೂ ನೀಡಲಾಗಿದ್ದು, ಮಹದಾಯಿಗೆ ಸೇರುವ ಕಾಲುವೆ, ನಾಲಾಗಳಿಗೆ ಭೇಟಿ ನೀಡಿದ್ದಾರೆ. ಹಲತ್ರಾ ನಾಲಾ ಮತ್ತು ಸೂರಲ್ ಕಾಲುವೆಗಳಿಗೆ ಜಿಗಣೆಗಳ ಕಾಟದ ನಡುವೆಯೂ ಪ್ರತಿಯೊಂದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 07, 2024 06:16 PM