AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪತಿಯಿಂದ ವಂಚನೆ ಆರೋಪ, ವಿಡಿಯೋ ಮಾಡಿಟ್ಟು ಸದಸ್ಯ ಆತ್ಮಹತ್ಯೆಗೆ ಯತ್ನ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನಾಗರಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ ವಿರುದ್ಧ ವಂಚನೆ ಆರೋಪ ಮಾಡಿ, ಇದೇ ಪಂಚಾಯಿತಿಯ ಸದಸ್ಯ ರಾಜು ಮದ್ಯದ ಅಮಲಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪತಿಯಿಂದ ವಂಚನೆ ಆರೋಪ, ವಿಡಿಯೋ ಮಾಡಿಟ್ಟು ಸದಸ್ಯ ಆತ್ಮಹತ್ಯೆಗೆ ಯತ್ನ
ಗ್ರಾಮ ಪಂಚಾಯಿತಿ ಸದಸ್ಯ ರಾಜು
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ವಿವೇಕ ಬಿರಾದಾರ|

Updated on:Jul 07, 2024 | 12:33 PM

Share

ಚಿತ್ರದುರ್ಗ, ಜುಲೈ 07: ಹೊಸದುರ್ಗ (Hosdurga) ತಾಲೂಕಿನ ನಾಗರಕಟ್ಟೆ (Nagarkatte) ಗ್ರಾಮ ಪಂಚಾಯಿತಿ ಸದಸ್ಯ ರಾಜು (40) ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಅಸ್ವಸ್ಥ ರಾಜು ಅವರನ್ನು ಶಿವಮೊಗ್ಗದ (Shivamogga) ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮ ಪಂಚಾಯಿತಿ (Gram Panchayat) ಸದಸ್ಯ ರಾಜು ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿದ್ದು, “ನನ್ನ ಸಾವಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪತಿ ಕೃಷ್ಣಮೂರ್ತಿ ಕಾರಣ. ಕೃಷ್ಣಮೂರ್ತಿ ಬಡವರಿಗೆ ವಂಚಿಸಿದ್ದಾನೆ.” ಎಂದು ರಾಜು ಆರೋಪ ಮಾಡಿದ್ದಾರೆ. “ಕೃಷ್ಣಮೂರ್ತಿ ಜಮೀನಿನಲ್ಲೇ ವಿಷ ಕುಡಿಯುತ್ತಿದ್ದೇನೆ. ನನ್ನ ಸಾವಿನ ಬಳಿಕ ಫ್ಲೆಕ್ಸ್​ ಹಾಕಿಸಲು 10 ಸಾವಿರ ರೂ. ಕೊಟ್ಟಿದ್ದೇನೆ. ಎಸ್ಪಿ, ಡಿಸಿ ಬರುವವರೆಗೆ ಶವ ಎತ್ತಬಾರದು.” ಎಂದು ವಿಡಿಯೋದಲ್ಲಿ ಹೇಳಿ ರಾಜು ಕುಡಿದ ಅಮಲಿನಲ್ಲಿ ವಿಷ ಸೇವಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕುಡಿದ ಅಮಲಿನಲ್ಲಿ ಸ್ನೇಹಿತನನ್ನು ಕೊಲೆಗೈದ ಆಪ್ತಮಿತ್ರರು?

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅಗಸರಹಳ್ಳಿಯಲ್ಲಿ ಶವ ಪತ್ತೆಯಾಗಿದೆ. ಟಿ.ಬೇಗೂರಿನ ಸಿದ್ದರಾಜು (59) ಮೃತ ವ್ಯಕ್ತಿ. ನಾಗ, ಚೇತು ಜೊತೆ ಮದ್ಯಸೇವಿಸಲು ಸಿದ್ದರಾಜು ತೆರಳಿದ್ದರು. ಮದ್ಯ ಸೇವಿಸಿದ ಬಳಿಕ ಕುಡಿದ ಅಮಲಿನಲ್ಲಿ ಸ್ನೇಹಿತರಾದ ನಾಗ ಮತ್ತು ಚೇತು ಟಿ.ಬೇಗೂರಿನ ಸಿದ್ದರಾಜುನನ್ನು ಕೊಲೆಗೈದು ಪರಾರಿಯಾಗಿದ್ದಾರೆ ಎಂಬ ಅನುಮಾನ ಮೂಡಿದೆ.

ತಡರಾತ್ರಿಯಾದರೂ ಸಿದ್ದರಾಜು ಮನೆಗೆ ಬಾರದಿದ್ದರಿಂದ ಪುತ್ರ ಕಿರಣ್ ಹುಡುಕಾಟ ನಡೆಸಿದ್ದಾನೆ. ಆಗ, ಅಗಸರಹಳ್ಳಿಯಲ್ಲಿ ಶವ ಪತ್ತೆಯಾಗಿದೆ. ಬಳಿಕ, ಈ ವಿಚಾರ ತಿಳಿದು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರಿಗೆ ತಿಳಿದಿದೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಸಿದ್ದರಾಜು ತಲೆಯಲ್ಲಿ ಗಾಯದ ಗುರುತು ಇತ್ತು. ಬಳಿಕ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದರು. ಸಿದ್ದರಾಜು ಜೊತೆಗಿದ್ದ ನಾಗ, ಚೇತುಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲ್ವೆ ಹಳಿ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆ

ಮೈಸೂರು: ಯಾದವಗಿರಿಯ ರೈಲ್ವೆ ಹಳಿ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆಯಾಗಿದೆ. ಚಾಮರಾಜ ಮೊಹಲ್ಲಾ ನಿವಾಸಿ ಸಂಜಯ್ ​(22) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಯೋ, ಕೊಲೆಯೋ ಅನ್ನೋ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:25 pm, Sun, 7 July 24