ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 16, 2024 | 3:36 PM

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹೈರಣಾಗಿದ್ದು, ಶ್ರೀಮಂತರ ಬೆಳೆ ಎಂದೆ ಖ್ಯಾತಿಯಾಗಿದ್ದ ದಾಳಿಂಬೆ ಮೇಲೆ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದ ಕಟಾವಿಗೆ ಬಂದಿದ್ದ ದಾಳಿಂಬೆಯನ್ನ ಸಕಾಲಕ್ಕೆ ಕಟಾವು ಮಾಡಲಾಗದೆ ತೋಟದಲ್ಲೆ ಕೊಳೆಯುತ್ತಿದೆ.

ಚಿಕ್ಕಬಳ್ಳಾಪುರ, ಅ.16: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹೈರಣಾಗಿದ್ದು, ಶ್ರೀಮಂತರ ಬೆಳೆ ಎಂದೆ ಖ್ಯಾತಿಯಾಗಿದ್ದ ದಾಳಿಂಬೆ ಮೇಲೆ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದ ಕಟಾವಿಗೆ ಬಂದಿದ್ದ ದಾಳಿಂಬೆಯನ್ನ ಸಕಾಲಕ್ಕೆ ಕಟಾವು ಮಾಡಲಾಗದೆ ತೋಟದಲ್ಲೆ ಕೊಳೆಯುತ್ತಿದೆ. ದಾಳಿಂಬೆ ತೋಟಗಳನ್ನು ನೋಡಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಾಡಿದ ಬೆಳೆ ಸಾಲ ತೀರಿಸುವುದು ಹೇಗೆ ಎಂದು ಅಳಲು ತೋಡಿಕೊಂಡಿದ್ದು,  ಈ ಕುರಿತು ನಮ್ಮ ಪ್ರತಿನಿಧಿ ಭೀಮಪ್ಪ ಪಾಟೀಲ ಪ್ರತ್ಯೇಕ್ಷ ವರದಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ