ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ: ಕೆ ಮರಿಗೌಡ
ಮರಿಗೌಡ ಸಿಎಂ ಸಿದ್ದರಾಮಯ್ಯನವರ ಅತ್ಯಂತ ಆಪ್ತರಲ್ಲೊಬ್ಬರು. ಸಿದ್ದರಾಮಯ್ಯ ಮೊದಲ ಅವಧಿಗೆ ಸಿಎ ಆಗಿದ್ದಾಗ ಯಾವುದೋ ಕಾರಣಕ್ಕೆ ಮರಿಗೌಡರನ್ನು ದೂಮಾಡಿದ್ದರು. ಅದರೆ ಸಿಎಂರ ಎಲ್ಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮರಿಗೌಡ ಸಿದ್ದರಾಮಯ್ಯ ಎರಡನೇ ಸಲ ಮುಖ್ಯಮಂತ್ರಿ ಆದಾಗ ಮುಡಾ ಅಧ್ಯಕ್ಷರಾಗಿದ್ದರು.
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕೆ ಮರಿಗೌಡ ರಾಜೀನಾಮೆ ನೀಡಿರುವುದು ರನೌಟ್, ರಿಟೈರ್ಡ್ ಹರ್ಟ್ ಅಥವಾ ಹಿಟ್ ವಿಕೆಟ್ಟಾ ಅಂತ ಗೊತ್ತಾಗುತ್ತಿಲ್ಲ. ಇಂದು ವಿಕಾಸಸೌಧದಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮರಿಗೌಡ, ಮುಖ್ಯಮಂತ್ರಿ ಸೂಚನೆ ಮೇರೆಗೆ ಮತ್ತು ಅನಾರೋಗ್ಯದ ನಿಮಿತ್ತ ಸ್ಥಾನ ಬಿಟ್ಟುಕೊಡುತ್ತಿರೋದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಪ್ರಕರಣ: ಯಡಿಯೂರಪ್ಪ ಪುತ್ರ, ಕುಮಾರಸ್ವಾಮಿಯಿಂದ ಈ ಕಳಂಕ-ಸಿದ್ದರಾಮಯ್ಯ ಸಹೋದರ
Published on: Oct 16, 2024 02:26 PM