Chikkamagaluru News: ಮದ್ಯದ ನಶೆಯಲ್ಲಿ ಆಟೋ ಚಾಲನೆ ಮಾಡಿ, ಕಂದಕಕ್ಕೆ ಉರುಳಿಸಿದ ಚಾಲಕ; ವಿಡಿಯೋ ವೈರಲ್
ಮಧ್ಯದ ನಶೆಯಲ್ಲಾಗುವ ಅಚಾತುರ್ಯ ಒಂದೆರಡಲ್ಲ. ಅದರಂತೆ ಇಲ್ಲೊಬ್ಬ ಆಸಾಮಿ, ಕಂಠಪೂರ್ತಿ ಮಧ್ಯ ಸೇವಿಸಿ, ನಶೆಯಲ್ಲಿಯೇ ಆಟೋ ಚಾಲನೆ ಮಾಡಿ, ಕಂದಕಕ್ಕೆ ಉರುಳಿಸಿದ್ದಾನೆ.
ಚಿಕ್ಕಮಗಳೂರು: ಮದ್ಯದ ನಶೆಯಲ್ಲಾಗುವ ಅಚಾತುರ್ಯ ಒಂದೆರಡಲ್ಲ. ಅದರಂತೆ ಇಲ್ಲೊಬ್ಬ ಆಸಾಮಿ, ಕಂಠಪೂರ್ತಿ ಮದ್ಯ (Drinks)ಸೇವಿಸಿ, ನಶೆಯಲ್ಲಿಯೇ ಆಟೋ ಚಾಲನೆ ಮಾಡುತ್ತಿದ್ದಾನೆ. ಅಷ್ಟೇ ಅಲ್ಲ ಇಡೀ ರಸ್ತೆಯೇ ತನ್ನದೆಂಬಂತೆ ಅಡ್ಡಾದಿಡ್ಡಿ ಚಾಲನೆ ಮಾಡುತ್ತ ಸೀದಾ ತೆಗೆದುಕೊಂಡು ಹೋಗಿ ಕಂದಕಕ್ಕೆ ಹಾಕಿದ್ದಾನೆ. ಈ ಘಟನೆ ಮೂಡಿಗೆರೆ ತಾಲೂಕಿನ ಚಂಡಗೋಡು ಗ್ರಾಮದ ಬಳಿ ನಡೆದಿದೆ. ಇನ್ನು ಇನ್ನೇನು ಆಟೋ ಉರುಳುತ್ತಿದ್ದಂತೆ ಚಾಲಕ ಆಟೋದಿಂದ ಜಿಗಿದಿದ್ದಾನೆ. ಈ ರಸ್ತೆ ಬದಿಯ ಕಂದಕಕ್ಕೆ ಆಟೋ ಊರಳಿ ಬಿದ್ದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 15, 2023 11:54 AM