ಫೇಸ್​ಬುಕ್​ನಲ್ಲಿ ವಿವಾಹಿತ ಮಹಿಳೆಯೊಂದಿಗೆ ಸ್ನೇಹ, ಮಧ್ಯಪ್ರದೇಶದಿಂದ ಹೈದರಾಬಾದ್​ಗೆ ಬಂದು ಆಕೆಯನ್ನು ಅಪಹರಿಸಿದ ಪ್ರಿಯಕರ

ವಿವಾಹಿತ ಮಹಿಳೆಯೊಂದಿಗೆ ಫೇಸ್​ಬುಕ್​ನಲ್ಲಿ ಸ್ನೇಹ ಬೆಳೆಸಿ ಕೊನೆಗೆ ಆಕೆಯನ್ನು ಅಪಹರಿಸಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಫೇಸ್​ಬುಕ್​ನಲ್ಲಿ ವಿವಾಹಿತ ಮಹಿಳೆಯೊಂದಿಗೆ ಸ್ನೇಹ, ಮಧ್ಯಪ್ರದೇಶದಿಂದ ಹೈದರಾಬಾದ್​ಗೆ ಬಂದು ಆಕೆಯನ್ನು ಅಪಹರಿಸಿದ ಪ್ರಿಯಕರ
ಅಪಹರಣ
Follow us
ನಯನಾ ರಾಜೀವ್
|

Updated on:Jul 13, 2023 | 8:03 AM

ವಿವಾಹಿತ ಮಹಿಳೆಯೊಂದಿಗೆ ಫೇಸ್​ಬುಕ್​ನಲ್ಲಿ ಸ್ನೇಹ ಬೆಳೆಸಿ ಕೊನೆಗೆ ಆಕೆಯನ್ನು ಅಪಹರಿಸಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಆಕೆ ಹೈದರಾಬಾದ್​ ನಿವಾಸಿ ಆತ ಮಧ್ಯಪ್ರದೇಶದವನಾಗಿದ್ದು, ಇಬ್ಬರಿಗೂ ಫೇಸ್​ಬುಕ್​ನಿಂದ ಪ್ರೀತಿ ಶುರುವಾಗಿತ್ತು.  ಮಧ್ಯಪ್ರದೇಶದ ಇಂದೋರ್‌ನಲ್ಲಿ ನಾಪತ್ತೆಯಾಗಿರುವ ಪುರುಷ ಮತ್ತು ಮಹಿಳೆಗಾಗಿ ಹೈದರಾಬಾದ್ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇಬ್ಬರು ನಿರಂತರವಾಗಿ ತಮ್ಮ ಸ್ಥಳವನ್ನು ಬದಲಾಯಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜುಲೈ 2 ರಿಂದ, ಹೈದರಾಬಾದ್ ನಿವಾಸಿಯಾಗಿರುವ ವಿವಾಹಿತ ಮಹಿಳೆ ತನ್ನ ಫೇಸ್‌ಬುಕ್ ಸ್ನೇಹಿತನೊಂದಿಗೆ ನಾಪತ್ತೆಯಾಗಿದ್ದಾಳೆ. ಮಹಿಳೆಯ ಪತಿ ಪತ್ನಿಯ ಅಪಹರಣದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೈದರಾಬಾದ್‌ನಲ್ಲಿ ಕಾಸ್ಮೆಟಿಕ್ಸ್ ವ್ಯವಹಾರದಲ್ಲಿ ಕೆಲಸ ಮಾಡುತ್ತಿರುವ ಸಂಜಯ್ ಜೈನ್ ಅವರು ತಮ್ಮ ಪತ್ನಿ ಸಲೋನಿಯನ್ನು ಅಪಹರಣ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

ಇವರಿಬ್ಬರು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ಎರಡು ವರ್ಷದ ಮಗ ಮತ್ತು ಆರು ತಿಂಗಳ ಹೆಣ್ಣು ಮಗುವಿದೆ. ಕಳೆದ ವರ್ಷ, ಸಲೋನಿ ಇಂದೋರ್‌ನ ರೋಹಿತ್ ಜತೆ ಫೇಸ್​ಬುಕ್​ನಲ್ಲಿ ಸ್ನೇಹ ಶುರುವಾಗಿತ್ತು.

ಮತ್ತಷ್ಟು ಓದಿ: Belagavi News: ಹಾಡಹಗಲೇ ಬಾಲಕಿ ಕಿಡ್ನಾಪ್​ಗೆ ಯತ್ನ; ಬೆಚ್ಚಿಬಿದ್ದ ಬೆಳಗಾವಿ ಜನ

ಕೆಲವು ದಿನಗಳ ಹಿಂದೆ, ಸಲೋನಿ ರೋಹಿತ್‌ನನ್ನು ಭೇಟಿಯಾಗಲು ಇಂದೋರ್‌ಗೆ ಹೋಗಿದ್ದರು. ಜುಲೈ 2ರಂದು ಹೈದರಾಬಾದಿಗೆ ಬಂದು ಆಕೆಯನ್ನು ಕರೆದುಕೊಂಡು ಹೋಗಿದ್ದ. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ, ಇಬ್ಬರು ಇಂದೋರ್‌ನಲ್ಲಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದರು.

ಈ ಬಗ್ಗೆ ಪೊಲೀಸರು ಮಹಿಳೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸಲೋನಿಯ ಇಬ್ಬರೂ ಮಕ್ಕಳು ಪ್ರಸ್ತುತ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.

ಸದ್ಯ ಪೊಲೀಸರು ನಿರಂತರವಾಗಿ ಅವರಿರುವ ಸ್ಥಳದ ಮೇಲೆ ನಿಗಾ ಇಡುತ್ತಿದ್ದು, ಶೀಘ್ರದಲ್ಲಿ ಅವರನ್ನು ಪತ್ತೆ ಮಾಡುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:02 am, Thu, 13 July 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್