ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!

Edited By:

Updated on: Oct 25, 2026 | 4:10 PM

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿರುವ ಮೊಸಳೆ ಪಾರ್ಕ್​ನಲ್ಲಿ ಅಪರೂಪದ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬಹುದು. ವ್ಯಕ್ತಿಯ ಧ್ವನಿ ಕೇಳಿ ನದಿಯಿಂದ ದಡಕ್ಕೆ ಬಂದ ಮೊಸಳೆಯನ್ನು ಕಂಡು ಅಲ್ಲಿದ್ದ ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ. ಬಾತುಕೋಳಿಯ ಧ್ವನಿ ಅನುಕರಣೆ ಮಾಡಿದ ಪ್ರವಾಸಿಗನ ಧ್ವನಿ ಕೇಳಿ ಮೊಸಳೆ ದಡಕ್ಕೆ ಆಗಮಿಸಿದೆ. ದಾಂಡೇಲಿಯ ಮೊಸಳೆ ಪಾರ್ಕ್‌ಗೆ ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಮೊಸಳೆ ಪಾರ್ಕ್​ನಲ್ಲಿ ಈ ಘಟನೆ ನಡೆದಿದೆ.

ದಾಂಡೇಲಿ, ಅಕ್ಟೋಬರ್ 25: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿರುವ ಮೊಸಳೆ ಪಾರ್ಕ್​ನಲ್ಲಿ ಅಪರೂಪದ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬಹುದು. ವ್ಯಕ್ತಿಯ ಧ್ವನಿ ಕೇಳಿ ನದಿಯಿಂದ ದಡಕ್ಕೆ ಬಂದ ಮೊಸಳೆಯನ್ನು ಕಂಡು ಅಲ್ಲಿದ್ದ ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ. ಬಾತುಕೋಳಿಯ ಧ್ವನಿ ಅನುಕರಣೆ ಮಾಡಿದ ಪ್ರವಾಸಿಗನ ಧ್ವನಿ ಕೇಳಿ ಮೊಸಳೆ ದಡಕ್ಕೆ ಆಗಮಿಸಿದೆ. ದಾಂಡೇಲಿಯ ಮೊಸಳೆ ಪಾರ್ಕ್‌ಗೆ ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಮೊಸಳೆ ಪಾರ್ಕ್​ನಲ್ಲಿ ಈ ಘಟನೆ ನಡೆದಿದೆ.

ಹುಬ್ಬಳ್ಳಿ ಭಾಗದಿಂದ ಬಂದಿದ್ದ ಇಬ್ಬರು ಪ್ರವಾಸಿಗರಲ್ಲೊಬ್ಬರು ಮೊಸಳೆಯನ್ನು ಆಕರ್ಷಿಸುವ ರೀತಿಯಲ್ಲಿ ಧ್ವನಿ ಮಾಡಿದ್ದಾರೆ. ಈ ವೇಳೆ ಆ ವ್ಯಕ್ತಿಯ ಧ್ವನಿಗೆ ದೂರದಿಂದ ಓಡಿ ಬಂದ ಮೊಸಳೆಗಳ  ದೃಶ್ಯವನ್ನು ಮೊಸಳೆ ಪಾರ್ಕ್‌ನ ಸ್ಥಳೀಯ ನಾಗರಾಜ್ ಪಾಟೀಲ್  ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More