ಮಂತ್ರಾಲಯದ ರಾಯರ ಮಠದಲ್ಲಿ ಕೇವಲ 35 ದಿನಗಳಲ್ಲಿ 3 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹ

| Updated By: ಆಯೇಷಾ ಬಾನು

Updated on: Nov 05, 2023 | 10:52 AM

ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಯರ ದರ್ಶನ ಮಾಡ್ತಾರೆ. ಈ ಬಾರಿ ಕೇವಲ 35 ದಿನಗಳಲ್ಲಿ ಇಲ್ಲಿ 3 ಕೋಟಿ 73 ಲಕ್ಷ 10 ಸಾವಿರ ನಗದು ಸಂಗ್ರಹವಾಗಿದೆ. ಹಾಗೂ 60 ಗ್ರಾಂ ಚಿನ್ನ, 1,396 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ಮಂತ್ರಾಲಯದ ರಾಯರ ಮಠದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ನೂರಾರು ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ರಾಯಚೂರು, ನ.05: ಮಂತ್ರಾಲಯದ ರಾಯರ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಅಪಾರ ಕಾಣಿಕೆ ಸಂಗ್ರಹವಾಗಿದೆ. 35 ದಿನಕ್ಕೆ 3 ಕೋಟಿ 73 ಲಕ್ಷ 10 ಸಾವಿರ ನಗದು ಸಂಗ್ರಹವಾಗಿದೆ. ಹಾಗೂ 60 ಗ್ರಾಂ ಚಿನ್ನ, 1,396 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ಮಂತ್ರಾಲಯದ ರಾಯರ ಮಠದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ನೂರಾರು ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ತುಂಗಭದ್ರಾ ನದಿಯ ದಡದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠ ಅಪಾರ ಸಂಖ್ಯೆಯ ಭಕ್ತಾಧಿಗಳನ್ನು ಹೊಂದಿದೆ. ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಯರ ದರ್ಶನ ಮಾಡ್ತಾರೆ. ಈ ಬಾರಿ ಕೇವಲ 35 ದಿನಗಳಲ್ಲಿ ಇಲ್ಲಿ 3 ಕೋಟಿ 73 ಲಕ್ಷ 10 ಸಾವಿರ ನಗದು ಸಂಗ್ರಹವಾಗಿದೆ. ಮೇ ತಿಂಗಳಲ್ಲಿ 3.53 ಕೋಟಿ ರೂಪಾಯಿ ಕಾಣಿಕೆ ಲಭ್ಯವಾಗಿತ್ತು. ನೋಟುಗಳ ರೂಪದಲ್ಲಿ ಸುಮಾರು 3.46 ಕೋಟಿ ರೂಪಾಯಿಗಳನ್ನು ಹಾಗೂ ನಾಣ್ಯಗಳ ರೂಪದಲ್ಲಿ 7.59 ಲಕ್ಷ ರೂಪಾಯಿ ದೇಣಿಗೆ ಸಂಗ್ರಹವಾಗಿತ್ತು.