ತುಮಕೂರಿನ ಎಡೆಯೂರು ಬಳಿ ನಿಡಸಾಲೆ ಗ್ರಾ.ಪಂ ಸದಸ್ಯನ ಸಿನಿಮೀಯ ಶೈಲಿಯಲ್ಲಿ ಅಪಹರಣ!
ಊಟ ಮುಗಿಸಿ ಕಾರು ಪಾರ್ಕ್ ಮಾಡಿದ್ದ ಸ್ಥಳಕ್ಕೆ ಬಂದಾಗ ಹೋಟೆಲ್ ಮುಂಭಾಗದಲ್ಲಿ ಅವರಿಗಾಗಿ ಕಾಯುತ್ತಿದ್ದ ಅಪರಿಚಿತರ ತಂಡ ಮಂಜುನಾಥ್ ರನ್ನು ಎತ್ತಿಕೊಂಡು ಹೋಗಿ ಅವರನ್ನು ಹೊತ್ತೊಯ್ಯಲೆಂದೇ ನಿಲ್ಲಿಸಿದ್ದ ಕಾರಿನಲ್ಲಿ ನೂಕುತ್ತಾರೆ.
ತುಮಕೂರು: ನಿಸ್ಸಂದೇಹವಾಗಿ ಇದು ಸಿನಿಮೀಯ ಶೈಲಿ ಅಪಹರಣ. ಅಪಹರಣಕ್ಕೆ ಒಳಗಾಗುತ್ತಿರುವ ವ್ಯಕ್ತಿ ತುಮಕೂರು ಜಿಲ್ಲೆ ನಿಡಸಾಲೆ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ (Manjunath) ಮತ್ತು ಘಟನೆ ನಡೆದಿರುವುದು ಎಡೆಯೂರಿನ (Yedeyuru) ಹೋಟೆಲೊಂದರ ಮುಂಭಾಗದಲ್ಲಿ. ವಿಷಯವೇನೆಂದರೆ, ಮಂಜುನಾಥ ಸೇರಿದಂತೆ ಒಟ್ಟು 10 ಗ್ರಾ. ಪಂ. ಸದಸ್ಯರು ಪಂಚಾಯಿತಿ ಅಧ್ಯಕ್ಷೆ ಪುಟ್ಟಲಿಂಗಮ್ಮ (Puttalingamma) ವಿರುದ್ಧ ಅವಿಶ್ವಾಸ ನಿರ್ಣಯ ಮಂಡಸಿದ ಬಳಿಕ ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸ ಮುಗಿಸಿಕೊಂಡು ವಾಪಸ್ಸು ಬರುವಾಗ ಎಡೆಯೂರಿನಲ್ಲಿ ಊಟಕ್ಕೆ ನಿಂತಿದ್ದಾರೆ. ಊಟ ಮುಗಿಸಿ ಕಾರು ಪಾರ್ಕ್ ಮಾಡಿದ್ದ ಸ್ಥಳಕ್ಕೆ ಬಂದಾಗ ಹೋಟೆಲ್ ಮುಂಭಾಗದಲ್ಲಿ ಅವರಿಗಾಗಿ ಕಾಯುತ್ತಿದ್ದ ಅಪರಿಚಿತರ ತಂಡ ಮಂಜುನಾಥ್ ರನ್ನು ಎತ್ತಿಕೊಂಡು ಹೋಗಿ ಅವರನ್ನು ಹೊತ್ತೊಯ್ಯಲೆಂದೇ ನಿಲ್ಲಿಸಿದ್ದ ಕಾರಿನಲ್ಲಿ ನೂಕುತ್ತಾರೆ. ಅಮೃತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.