Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಮ್ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ನೀಡಿರುವ ಭದ್ರತೆ ಮುಂದುವರಿಸಲಾಗುವುದು: ನಗರ ಪೊಲೀಸ್ ಆಯುಕ್ತರು

ಸುಪ್ರೀಮ್ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ನೀಡಿರುವ ಭದ್ರತೆ ಮುಂದುವರಿಸಲಾಗುವುದು: ನಗರ ಪೊಲೀಸ್ ಆಯುಕ್ತರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 31, 2022 | 1:30 PM

ಆದೇಶ ಬರುವ ಮೊದಲೇ ಈದ್ಗಾ ಮೈದಾನಕ್ಕೆ ಭದ್ರತೆ ಒದಗಿಸಲಾಗಿತ್ತು, ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಆದೇಶ ಬಂದಿರುವುದರಿಂದ ಅದನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಹಿಂದೂಪರ ಸಂಘಟನೆಗಳು ಮಾಡಿದ ಮನವಿಯನ್ನು ಆಲಿಸಿ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಮ್ ಕೋರ್ಟ್ (Supreme Court) ಆದೇಶ ನೀಡಿದ ಬಳಿಕ ಮೈದಾನದಲ್ಲಿ ಪೊಲೀಸ್ ಭದ್ರಕೋಟೆ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ನಗರದ ಪೊಲೀಸ್ ಕಮೀಶನರ್ ಸಿ ಹೆಚ್ ಪ್ರತಾಪ ರೆಡ್ಡಿ (CH Pratap Reddy) ಅವರು ಮಾಧ್ಯಮದವರೊಂದಿಗೆ ಮಾತಾಡಿ, ಆದೇಶ ಬರುವ ಮೊದಲೇ ಈದ್ಗಾ ಮೈದಾನಕ್ಕೆ ಭದ್ರತೆ ಒದಗಿಸಲಾಗಿತ್ತು, ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಆದೇಶ ಬಂದಿರುವುದರಿಂದ ಅದನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

Published on: Aug 31, 2022 01:24 PM