ಗುಬ್ಬಿ ತಾಲೂಕಿನಲ್ಲಿ ಋತುಚಕ್ರವಾದ ಮಹಿಳೆಯರನ್ನು ಊರಿಂದ ಹೊರಗಿಡುವ ಸಂಪ್ರದಾಯ, ಗ್ರಾಮಸ್ಥರಿಗೆ ಚಳಿ ಬಿಡಿಸಿದ ತಹಶೀಲ್ದಾರ್ ಆರತಿ
ಗುಬ್ಬಿ ತಾಲೂಕಿನ ಚಿಕ್ಕನೆಟ್ಟಗುಂಟೆ ಗ್ರಾಮಕ್ಕೆ ಗುಬ್ಬಿ ತಹಶೀಲ್ದಾರ್ ಆರತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಂಗನವಾಡಿ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟಾದರೂ ಮತ್ತೆ ಮೌಢ್ಯ ವಾಡಿಕೆಯಂತೆ ಗೋಮೂತ್ರ ಪ್ರೋಕ್ಷಿಸಿ, ಗ್ರಾಮಸ್ಥರು ಆ ಮಹಿಳೆಯರನ್ನು ಅವರವರ ಮನೆಯೊಳಕ್ಕೆ ಬಿಟ್ಟುಕೊಂಡಿದ್ದಾರೆ.
ತುಮಕೂರು, ಸೆಪ್ಟೆಂಬರ್ 16: ರಾಜಧಾನಿಗೆ ಬೆಂಗಳೂರಿಗೆ ಅಂಟಿಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ಆಗಾಗ್ಗೆ ಮೌಢ್ಯಾಚರಣೆ ಢಾಳಾಗಿ ಕಂಡುಬರುತ್ತದೆ. ಅದರಲ್ಲು ಗೊಲ್ಲರಹಟ್ಟಿಗಳಲ್ಲಿ ಮೌಢ್ಯಾಚರಣೆ ಮುಂದುವರಿದಿದೆ. ತಾಜಾ ಆಗಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚಿಕ್ಕನೆಟ್ಟಗುಂಟೆ ಗ್ರಾಮದಲ್ಲಿ ಮತ್ತೊಂದು ಘಟನೆ ನಡೆದಿದೆ. ಗುಬ್ಬಿ ತಹಶೀಲ್ದಾರ್ ಆರತಿ ನೇತೃತ್ವದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ತಂಡ ಮೌಢ್ಯಾಚರಣೆಯನ್ನು ಬಟಾಬಯಲಿಗೆ ತಂದಿದೆ. ಮುಟ್ಟಾದ (periods) ಸಂದರ್ಭದಲ್ಲಿ ಮಹಿಳೆಯರನ್ನ ಗ್ರಾಮದಿಂದ ಹೊರಗಿಟ್ಟು ಮೌಢ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿದೆ.
ಗೊಲ್ಲ ಸಮುದಾಯದಲ್ಲಿ ಮತ್ತೆ ಈ ಮೌಢ್ಯಾಚರಣೆ ಕಂಡುಬಂದಿದೆ. ಗ್ರಾಮದ ಅಂಗನವಾಡಿ ಶಿಕ್ಷಕಿ ಸುಜಾತ ಹಾಗೂ ಬಿಸಿಯೂಟದ ಕಾರ್ಯಕರ್ತೆ ಸಾವಿತ್ರಮ್ಮ ಜೊತೆಗೆ ಓರ್ವ ಮಹಿಳೆಯನ್ನು ಗ್ರಾಮದಿಂದ ಹೊರಗಿಟ್ಟು ಮೌಢ್ಯಾ ನಂಬಿಕೆಗೆ ಜೋತುಬಿದ್ದಿದ್ದಾರೆ.
ಋತುಚಕ್ರ ಗೊಡ್ಡುನಂಬಿಕೆ: ಗ್ರಾಮಸ್ಥರಿಗೆ ಛೀಮಾರಿ ಆರತಿ ಎತ್ತಿದ ತಹಶೀಲ್ದಾರ್ ಆರತಿ!
ಗ್ರಾಮಕ್ಕೆ ತಹಶೀಲ್ದಾರ್ ಆರತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಂಗನವಾಡಿ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟಾದರೂ ಮತ್ತೆ ಮೌಢ್ಯ ವಾಡಿಕೆಯಂತೆ ಗೋಮೂತ್ರ ಪ್ರೋಕ್ಷಿಸಿ, ಗ್ರಾಮಸ್ಥರು ಆ ಮಹಿಳೆಯರನ್ನು ಅವರವರ ಮನೆಯೊಳಕ್ಕೆ ಬಿಟ್ಟುಕೊಂಡಿದ್ದಾರೆ.
ಚಿಕ್ಕನೆಟ್ಟಗುಂಟೆ ಗ್ರಾಮಸ್ಥರು ಋತುಚಕ್ರವಾದ ಮಹಿಳೆಯರನ್ನು ಮೂರು ದಿನಗಳ ಕಾಲ ಊರಿನಿಂದ ಹೊರಗಿಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದರು. ಇನ್ನಾದರೂ ಅದಕ್ಕೆ ಕೊನೆ ಹೇಳುತ್ತಾರಾ ಕಾದು ನೋಡಬೇಕಿದೆ.
ಅಂಟುಜಾಡ್ಯ ದಂತೆ ಪ್ರಪಂಚದಾದ್ಯಂತ ಈ ಗೊಡ್ಡು ಸಂಪ್ರದಾಯವಿದೆ, ವಿವರವಾದ ಲೇಖನ ಇಲ್ಲಿದೆ
ಮುಟ್ಟಾದ ಸಂದರ್ಭದಲ್ಲಿ ಮಹಿಳೆಯರನ್ನ ಗ್ರಾಮದಿಂದ ಹೊರಗಿಟ್ಟು ಮೌಢ್ಯಾಚರಣೆ ಮಾಡುವುದು ಅಂಟುಜಾಡ್ಯ ದಂತೆ. ಪ್ರಪಂಚದಾದ್ಯಂತ ಈ ಗೊಡ್ಡು ಸಂಪ್ರದಾಯವನ್ನು ಆಧುನಿಕ ಸಮಾಜದಲ್ಲಿ ಯಾವುದೇ ಎಗ್ಗುಸಿಗ್ಗು ಇಲ್ಲದೆ ಆಚರಿಸುತ್ತಾರೆ. ಇದರ ಕುರಿತು ವಿವರವಾದ ಲೇಖನ ಇಲ್ಲಿದೆ