ಯಾದಗಿರಿ ಚಿತ್ತಾಪುರ ರಸ್ತೆಯಲ್ಲಿ ಟ್ರಕ್ ಹರಿದು 25 ಕುರಿಗಳು ಸಾವು
ಶನಿವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಯಾದಗಿರಿ ಹೊರವಲಯದ ಚಿತ್ತಾಪುರ ರಸ್ತೆಯಲ್ಲಿ ಟ್ರಕ್ ಹರಿದು 25 ಕುರಿಗಳು ಸಾವಿಗೀಡಾಗಿವೆ. ಯಾದಗಿರಿ ಸಂಚಾರ ಪೊಲೀಸರು ಟ್ರಕ್ ಚಾಲನನ್ನು ವಶಕ್ಕೆ ಪಡೆದಿದ್ದಾರೆ.
ಯಾದಗಿರಿ ಸೆ.16: ಶನಿವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಯಾದಗಿರಿ ಹೊರವಲಯದ ಚಿತ್ತಾಪುರ ರಸ್ತೆಯಲ್ಲಿ ಟ್ರಕ್ (Truck) ಹರಿದು 25 ಕುರಿಗಳು (Sheep) ಸಾವಿಗೀಡಾಗಿವೆ. ಯಾದಗಿರಿ (Yadgiri) ಸಂಚಾರ ಪೊಲೀಸರು ಟ್ರಕ್ ಚಾಲನನ್ನು ವಶಕ್ಕೆ ಪಡೆದಿದ್ದಾರೆ. ಕುರಿಗಾಯಿಗಳು ಕುರಿ ಮೇಯಿಸಲು ರಸ್ತೆ ದಾಟಿ ಹೋಗುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಟ್ರಕ್ ಕುರಿಗಳ ಮೇಲೆ ಹರಿದಿದೆ. ಇದರಿಂದ ನಾಗಪ್ಪ, ಅಂಬಲಯ್ಯ, ಧರ್ಮರಾಜ ಹಾಗೂ ನಿಂಗಪ್ಪ ಎಂಬ ಕುರಿಗಾಯಿಗಳಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಯಾದಗಿರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published on: Sep 16, 2023 07:33 AM
Latest Videos