ರಾಯಚೂರಿನಲ್ಲಿ ಮಂಗಳಮುಖಿ ಸಮುದಾಯದಿಂದ ಪ್ರಜಾಪ್ರಭುತ್ವ ದಿನಾಚರಣೆ; ಇಲ್ಲಿದೆ ವಿಡಿಯೋ
ಮಂಗಳಮುಖಿ ಸಮುದಾಯದವರು ಸಂವಿಧಾನದ ಪೀಠಿಕೆ ಓದಿದ್ದಾರೆ. ಈ ಮೂಲಕ ಸಮಾಜದಲ್ಲಿ ಎಲ್ಲರೂ ಸಮನಾಗಿ ಬದುಕುತ್ತಿದ್ದೇವೆ. ನಾವು ಸಂವಿಧಾನದ ಉದ್ದೇಶವನ್ನು ಗೌರವಿಸುತ್ತಿದ್ದೇವೆ ಎನ್ನುವುದನ್ನು ಸಮಾಜಕ್ಕೆ ತೋರಿಸಿದ್ದಾರೆ.
ರಾಯಚೂರು, ಸೆ.15: ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ರಾಯಚೂರು (Raichur) ನಗರದಲ್ಲಿ ಮಂಗಳಮುಖಿ ಸಮುದಾಯದಿಂದ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗಿದ್ದು, ಮಂಗಳಮುಖಿ ಸಮುದಾಯದವರು ಸಂವಿಧಾನದ ಪೀಠಿಕೆ ಓದಿದ್ದಾರೆ. ಈ ಮೂಲಕ ಸಮಾಜದಲ್ಲಿ ಎಲ್ಲರೂ ಸಮನಾಗಿ ಬದುಕುತ್ತಿದ್ದೇವೆ. ನಾವು ಸಂವಿಧಾನದ ಉದ್ದೇಶವನ್ನು ಗೌರವಿಸುತ್ತಿದ್ದೇವೆ ಎನ್ನುವುದನ್ನು ಸಮಾಜಕ್ಕೆ ತೋರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ‘ಸಮಾಜ ನಮಗೆ ಭಿಕ್ಷಾಟನೆ ರೂಪದಲ್ಲಿ ಗುರುತಿಸಿದೆ. ಆದರೆ, ನಾವು ಭಾರತ ಸಂವಿಧಾನದಲ್ಲಿದ್ದೇವೆ. ಅದರಿಂದ ನಮ್ಮ ಸಮುದಾಯಕ್ಕೆ ಎಲ್ಲ ರೀತಿಯ ನ್ಯಾಯ ಸಿಕ್ಕಿದೆ. ನಾವು ಅದನ್ನು ಗೌರವಿಸುತ್ತಿದ್ದೇವೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos