Belagavi News: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ, ದ್ವೀಪಗಳಂತೆ ಕಾಣುತ್ತಿವೆ ಜಿಲ್ಲೆಯ ಗ್ರಾಮಗಳು!

Belagavi News: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ, ದ್ವೀಪಗಳಂತೆ ಕಾಣುತ್ತಿವೆ ಜಿಲ್ಲೆಯ ಗ್ರಾಮಗಳು!

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 29, 2023 | 1:42 PM

ಗ್ರಾಮದ ಹೊರವಲಯದಲ್ಲಿರುವ ಮನೆಗಳು ಜಲಾವೃತಗೊಂಡಿವೆ. ಕಬ್ಬು ಮತ್ತು ಭತ್ತದ ಗದ್ದೆಗಳಿಗೆ ನೀರು ನುಗ್ಗಿರುವುದರಿಂದ ಬೆಳೆಗಳು ಬಹುತೇಕ ಹಾಳಾಗಿವೆ.

ಬೆಳಗಾವಿ: ರಾಜ್ಯದಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆ ಕೆಲವಿ ಭಾಗಗಳ ಊರುಗಳನ್ನು ದ್ವೀಪಗಳನ್ನಾಗಿ ಪರಿವರ್ತಿಸುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ (Western Ghats region) ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ಮಲಪ್ರಭಾ ಮತ್ತು ಮಾರ್ಕಂಡೇಯ ನದಿಗಳನ್ನು (Markandeya River) ಉಕ್ಕಿ ಹರಿಯುವಂತೆ ಮಾಡಿದೆ. ವಿಡಿಯೋದಲ್ಲಿ ಕಾಣುತ್ತಿರುವ ಹಾಗೆ, ಅಂಬೇವಾಡಿ (Ambewadi) ಹೆಸರಿನ ಗ್ರಾಮಕ್ಕೆ ಮಾರ್ಕಂಡೇಯ ನದಿ ನೀರು ಹರಿದು ಬಂದಿರುವುದರಿಂದ ಊರು ಪರ್ಯಾಯ ದ್ವೀಪದ ಹಾಗೆ ಗೋಚರಿಸುತ್ತಿದೆ. ಗ್ರಾಮದ ಹೊರವಲಯದಲ್ಲಿರುವ ಮನೆಗಳು ಜಲಾವೃತಗೊಂಡಿವೆ. ಕಬ್ಬು ಮತ್ತು ಭತ್ತದ ಗದ್ದೆಗಳಿಗೆ ನೀರು ನುಗ್ಗಿರುವುದರಿಂದ ಬೆಳೆಗಳು ಬಹುತೇಕ ಹಾಳಾಗಿವೆ ಎಂದು ಬೆಳಗಾವಿಯ ಟಿವಿ9 ವರದಿಗಾರ ಹೇಳುತ್ತಾರೆ. ಮಳೆ ಸುರಿಯುವುದು ಮುಂದುವರಿದರೆ ಅಂಬೇವಾಡಿ ಸುತ್ತಮುತ್ತಲಿನ ಊರುಗಳು ಸಹ ಜಲಾವೃತಗೊಳ್ಳಲಿವೆ ಎಂದು ವರದಿಗಾರ ಹೇಳುತ್ತಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 29, 2023 01:41 PM