Loading video

IND vs NZ: ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ

|

Updated on: Oct 17, 2024 | 10:10 PM

IND vs NZ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಕಾಲಿಗೆ ಚೆಂಡು ಬಡಿದು ನೋವಿನಿಂದ ನರಳಾಡ್ಡಿದ ವಿಕೆಟ್ ಕೀಪರ್ ರಿಷನ್ ಪಂತ್ ಅರ್ಧದಲ್ಲೇ ಮೈದಾನ ತೊರೆದಿದ್ದರು. ಆ ಬಳಿಕ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬ ಮಾಹಿತಿ ಸಿಕ್ಕಿರಲಿಲ್ಲ. ಆದರೆ ದಿನದಾಟ ಮುಗಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿರುವ ರೋಹಿತ್ ಶರ್ಮಾ ಅಭಿಮಾನಿಗಳ ಆತಂಕವನ್ನು ಕಡಿಮೆ ಮಾಡಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಕಿವೀಸ್ ತಂಡ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 46 ರನ್​ಗಳಿಗೆ ಆಲೌಟ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾ, ಇದೀಗ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಇಂಜುರಿಯಿಂದ ಇನ್ನಷ್ಟು ಒತ್ತಡಕ್ಕೆ ಒಳಗಾಗಿದೆ. ಪಂದ್ಯದ ಎರಡನೇ ದಿನದಂದು ಕಾಲಿಗೆ ಚೆಂಡು ಬಿದ್ದು, ಗಾಯಕ್ಕೆ ತುತ್ತಾದ ಪಂತ್, ಆಟವನ್ನು ಮಧ್ಯದಲ್ಲೇ ತೊರೆದು, ಪೆವಿಲಿಯನ್ ಸೇರಿಕೊಂಡಿದ್ದರು. ಇದೀಗ ದಿನದಾಟದಂತ್ಯದ ನಂತರ ಪಂತ್ ಇಂಜುರಿಯ ಬಗ್ಗೆ ಮಾಹಿತಿ ನೀಡಿರುವ ರೋಹಿತ್ ಶರ್ಮಾ, ಅಭಿಮಾನಿಗಳ ಆತಂಕವನ್ನು ಕೊಂಚ ಕಡಿಮೆ ಮಾಡಿದ್ದಾರೆ.

ರೋಹಿತ್ ಹೇಳಿದ್ದೇನು?

ಎರಡನೇ ದಿನದಾಟದ ಅಂತ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ರಿಷಬ್ ಪಂತ್ ಗಾಯದ ಕುರಿತು ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ‘ಪಂತ್ ಅವರ ಮೊಣಕಾಲು ಊದಿಕೊಂಡಿದೆ. ಇದೇ ಮೊಣಕಾಲಿಗೆ ಪಂತ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಹೀಗಾಗಿ ಮುನ್ನೇಚ್ಚರಿಕೆಯ ಕ್ರಮವಾಗಿ ನಾವು ಅವರಿಗೆ ವಿರಾಮ ನೀಡಿದ್ದೇವೆ. ಸ್ವಲ್ಪ ಚೇತರಿಕೆಯ ನಂತರ ಪಂತ್ ಪಂದ್ಯಕ್ಕೆ ಮರಳುವ ನಿರೀಕ್ಷೆಯಿದೆ ಎಂದಿದ್ದಾರೆ.

ಪಂತ್​ಗೆ ಗಾಯವಾಗಲು ಕಾರಣವೇನು?

ವಾಸ್ತವವಾಗಿ ಈ ಘಟನೆ ನಡೆದಿದ್ದು 37ನೇ ಓವರ್‌ನ ಕೊನೆಯ ಎಸೆತದಲ್ಲಿ, ರವೀಂದ್ರ ಜಡೇಜಾ ಎಸೆದ ಚೆಂಡು ಪಂತ್ ಅವರ ಮೊಣಕಾಲಿಗೆ ಬಡಿಯಿತು. ಹೀಗಾಗಿ ತೀವ್ರ ನೋವಿನಿಂದ ಪಂತ್ ಮೈದಾನದಲ್ಲೇ ನರಳಲಾರಂಭಿಸಿದರು. ಕೂಡಲೇ ಸ್ಥಳಕ್ಕೆ ಬಂದ ಫಿಸಿಯೋ, ಪಂತ್​ಗೆ ಪ್ರಥಮ ಚಿಕಿತ್ಸೆ ನೀಡಿದರು. ಆದಾಗ್ಯೂ ಪಂತ್​ಗೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡ ಹೋಗಲಾಯಿತು. ಮೈದಾನದಿಂದ ಹೊರಹೋಗುವಾಗಲು ಪಂತ್​ ನೋವಿನಿಂದ ಕುಂಟುತ್ತಾ ಸಾಗಿದರು. ಹೀಗಾಗಿ ಪಂತ್ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.