‘ಮೋದಿ ಅದಾನಿ ಒಂದೇ’ ಎಂದು ಬರೆದ ಜಾಕೆಟ್ ಧರಿಸಿ ಸಂಸತ್ ಹೊರಗೆ ಇಂಡಿಯಾ ಬಣ ಪ್ರತಿಭಟನೆ
ಮೋದಿ ಅದಾನಿ ಏಕ್ ಹೇ ಎಂಬ ಸ್ಟಿಕರ್ ಅಂಟಿಸಿದ್ದ ಜಾಕೆಟ್ ಧರಿಸಿದ್ದ ಇಂಡಿಯಾ ಬಣದ ಸಂಸದರು ಪಾರ್ಲಿಮೆಂಟ್ ಹೊರಗೆ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ಸಂಸದರು, ಇತರ ವಿರೋಧ ಪಕ್ಷಗಳಾದ ಆರ್‌ಜೆಡಿ, ಆಪ್ ಮತ್ತು ಎಡಪಕ್ಷಗಳ ಸಂಸದರು ಭಾಗವಹಿಸಿದ್ದರು.
ನವದೆಹಲಿ: ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ತನಿಖೆಗೆ (ಜೆಪಿಸಿ) ತಮ್ಮ ಬೇಡಿಕೆಯನ್ನು ಪುನರುಚ್ಚರಿಸಲು ಇಂಡಿಯಾ ಬ್ಲಾಕ್‌ನ ಸಂಸದರು ಇಂದು “ಮೋದಿ ಅದಾನಿ ಏಕ್ ಹೈ” (ಮೋದಿ-ಅದಾನಿ ಒಂದೇ) ಎಂಬ ಸ್ಟಿಕ್ಕರ್‌ಗಳನ್ನು ಅಂಟಿಸಿರುವ ಜಾಕೆಟ್‌ಗಳನ್ನು ಧರಿಸಿ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ವಿರುದ್ಧ ತನಿಖೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಏಕೆಂದರೆ ಅದರಿಂದ ಅವರ ವಿರುದ್ಧವೇ ತನಿಖೆಯಾಗುತ್ತದೆ ಎಂದು ಟೀಕಿಸಿದ್ದಾರೆ.
ಲಂಚ ಮತ್ತು ವಂಚನೆ ಆರೋಪದ ಮೇಲೆ ಯುಎಸ್ ನ್ಯಾಯಾಲಯದಲ್ಲಿ ಅದಾನಿ ವಿರುದ್ಧದ ದೋಷಾರೋಪಣೆಯ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಆಗ್ರಹಿಸಿದರು. ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲು ಪ್ರಧಾನಿ ಮೋದಿಯನ್ನು ಒತ್ತಾಯಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ