ಆತ್ಮಪ್ರಜ್ಞೆ ಮರೆತಿದ್ದಕ್ಕೆ ಗುಲಾಮಗಿರಿ ಅನುಭವಿಸಿದೆವು: ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿಜಯದಶಮಿ ಉತ್ಸವದಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಅವರು ದೇಶದ ಏಕತೆ, ವೈವಿಧ್ಯತೆ ಮತ್ತು ಸಂವಿಧಾನದ ಮೌಲ್ಯಗಳ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ. ನೂರು ವರ್ಷಗಳಿಂದ ಆರ್‌ಎಸ್‌ಎಸ್ ದೇಶವಾಸಿಗಳಲ್ಲಿ 'ಸ್ವತ್ವ' (ಆತ್ಮಪ್ರಜ್ಞೆ) ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ ಎಂದ ಅವರು, ಸಂವಿಧಾನದ ಪೀಠಿಕೆಯಲ್ಲಿರುವ "ಭಾರತದ ಪ್ರಜೆಗಳಾದ ನಾವು" ಎಂಬ ಸಾಲುಗಳಲ್ಲೇ ಈ 'ಸ್ವತ್ವ' ಮತ್ತು ಏಕತೆಯ ಭಾವ ಅಡಗಿದೆ ಎಂದರು.
ನಾಗ್ಪುರ, ಅಕ್ಟೋಬರ್ 20: ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿಜಯದಶಮಿ ಉತ್ಸವದಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಅವರು ದೇಶದ ಏಕತೆ, ವೈವಿಧ್ಯತೆ ಮತ್ತು ಸಂವಿಧಾನದ ಮೌಲ್ಯಗಳ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ.
ನೂರು ವರ್ಷಗಳಿಂದ ಆರ್‌ಎಸ್‌ಎಸ್ ದೇಶವಾಸಿಗಳಲ್ಲಿ ‘ಸ್ವತ್ವ’ (ಆತ್ಮಪ್ರಜ್ಞೆ) ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ ಎಂದ ಅವರು, ಸಂವಿಧಾನದ ಪೀಠಿಕೆಯಲ್ಲಿರುವ “ಭಾರತದ ಪ್ರಜೆಗಳಾದ ನಾವು” ಎಂಬ ಸಾಲುಗಳಲ್ಲೇ ಈ ‘ಸ್ವತ್ವ’ ಮತ್ತು ಏಕತೆಯ ಭಾವ ಅಡಗಿದೆ ಎಂದರು. “ಪ್ರಾಚೀನ ಕಾಲದಿಂದಲೂ ಭಾರತ ಹಲವು ವೈವಿಧ್ಯತೆಗಳ ನಡುವೆಯೂ ಒಂದೇ ರಾಷ್ಟ್ರವಾಗಿತ್ತು. ಆದರೆ ನಾವು ಈ ಒಗ್ಗಟ್ಟನ್ನು ಮರೆತಾಗ ದೇಶ ಒಡೆದು ದುರ್ಬಲವಾಯಿತು, ನೂರಾರು ವರ್ಷಗಳ ವಸಾಹತುಶಾಹಿ ಗುಲಾಮಗಿರಿ ಅನುಭವಿಸಬೇಕಾಯಿತು” ಎಂದು ಎಚ್ಚರಿಸಿದರು.
ದೇವಾಲಯ, ಮಠ ಅಥವಾ ಗುರುದ್ವಾರ ಹೀಗೆ ಎಲ್ಲೇ ಹೋದರೂ ವೈವಿಧ್ಯತೆಯನ್ನು ಗೌರವಿಸಿ ರಕ್ಷಿಸುವ ಸನಾತನ ತತ್ತ್ವವೇ ಕಾಣಸಿಗುತ್ತದೆ ಎಂದ ಅವರು, ಕಾಲಕ್ಕೆ ತಕ್ಕಂತೆ ಬದಲಾಗುವ ನಮ್ಯತೆ ಸನಾತನ ಪರಂಪರೆಯ ಶಕ್ತಿ ಎಂದು ಪ್ರತಿಪಾದಿಸಿದರು. ಶತಮಾನೋತ್ಸವ ವರ್ಷದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

