IND vs PAK: ಶೇಕ್ ಹ್ಯಾಂಡ್ ಮಾಡಿದ ಭಾರತ-ಪಾಕ್ ಆಟಗಾರರು

Updated on: Oct 15, 2025 | 8:55 AM

India vs Pakistan: ಈ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮೊದಲಾರ್ಧದಲ್ಲೇ ಎರಡು ಗೋಲು ಬಾರಿಸಿ ಪಾಕಿಸ್ತಾನ್ ತಂಡವು ಮುನ್ನಡೆ ಸಾಧಿಸಿತ್ತು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಭಾರತೀಯರು ಭರ್ಜರಿ ಪ್ರದರ್ಶನದೊಂದಿಗೆ ಮೂರು ಗೋಲು ಬಾರಿಸಿ ಪಂದ್ಯವನ್ನು 3-3 ಅಂತರದಿಂದ ಡ್ರಾಗೊಳಿಸುವಲ್ಲಿ ಯಶಸ್ವಿಯಾದರು.

ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ಆಟಗಾರರು ಪರಸ್ಪರ ಹಸ್ತಲಾಘವ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಮುಗಿದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ವೇಳೆ ಭಾರತೀಯ ಆಟಗಾರರು ಪಾಕ್ ತಂಡದವರೊಡನೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ್ದರು. ಇದನ್ನೇ ಭಾರತೀಯ ಮಹಿಳಾ ತಂಡವು ಏಕದಿನ ವಿಶ್ವಕಪ್​ನಲ್ಲಿ ಮುಂದುವರೆಸಿತ್ತು.

ಆದರೆ ಭಾರತೀಯ ಹಾಕಿ ತಂಡವು ಪಾಕ್ ಆಟಗಾರರೊಂದಿಗೆ ಕೈಕುಲುಕುವ ಮೂಲಕ ಕ್ರೀಡೆಯನ್ನು ರಾಜಕೀಯದಿಂದ ದೂರವಿಡಲು ನಿರ್ಧರಿಸಿದ್ದಾರೆ. ಅದರಂತೆ ಜೋಹರ್​ನಲ್ಲಿ ನಡೆದ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಿದ್ದಾರೆ.

ಇನ್ನು ಈ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮೊದಲಾರ್ಧದಲ್ಲೇ ಎರಡು ಗೋಲು ಬಾರಿಸಿ ಪಾಕಿಸ್ತಾನ್ ತಂಡವು ಮುನ್ನಡೆ ಸಾಧಿಸಿತ್ತು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಭಾರತೀಯರು ಭರ್ಜರಿ ಪ್ರದರ್ಶನದೊಂದಿಗೆ ಮೂರು ಗೋಲು ಬಾರಿಸಿ ಪಂದ್ಯವನ್ನು 3-3 ಅಂತರದಿಂದ ಡ್ರಾಗೊಳಿಸುವಲ್ಲಿ ಯಶಸ್ವಿಯಾದರು. ಭಾರತದ ಪರ ಅರಿಜೀತ್ ಸಿಂಗ್ ಹುಂಡಾಲ್, ಸೌರಭ್ ಆನಂದ್ ಕುಶ್ವಾಹ ಹಾಗೂ ಮನ್ಮೀತ್ ಸಿಂಗ್ ಗೋಲು ಬಾರಿಸಿ ಮಿಂಚಿದರು.