ಸಿಎಂ ರೇಸ್ನಲ್ಲಿರುವ ಡಿಕೆ ಶಿವಕುಮಾರ್ಗೆ ಅಭಯ!? ಬಲಗಡೆಯಿಂದ ಹೂ ನೀಡಿದ ಹಾಸನಾಂಬೆ
ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ರಾತ್ರಿ ಪತ್ನಿ ಸಮೇತ ಹಾಸನಾಂಬಾ ಕ್ಷೇತ್ರಕ್ಕೆ ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಹಾಸನಾಂಬೆ ದೇವಿ ಎರಡೆರಡು ಬಾರಿ ಬಲಗಡೆಯಿಂದ ಹೂವು ನೀಡಿದ್ದಾಳೆ. ಇದರಿಂದ, ದೇವಿಯ ಅಭಯ ಶಿವಕುಮಾರ್ಗೆ ಸಿಕ್ಕಿತೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಹಾಸನ, ಅಕ್ಟೋಬರ್ 15: ಒಂದೆಡೆ ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಮುನ್ನೆಲೆಗೆ ಬಂದಿದ್ದರೆ ಮತ್ತೊಂದೆಡೆ, ಮಂಗಳವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಹಾಸನಾಂಬಾ ಕ್ಷೇತ್ರಕ್ಕೆ ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದರು. ಡಿ.ಕೆ.ಶಿವಕುಮಾರ್ ಪೂಜೆ ವೇಳೆ ಹಾಸನಾಂಬೆ ಬಲಗಡೆಯಿಂದ ಹೂವು ನೀಡಿದ್ದಾಳೆ. ಎರಡೆರಡು ಬಾರಿ ಹಾಸನಾಂಬೆ ದೇವಿಯ ಮೇಲಿಂದ ಬಲಗಡೆಯಿಂದ ಹೂವು ಬಿದ್ದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಹುದ್ದೆಯ ರೇಸ್ನಲ್ಲಿರುವ ಡಿಕೆ ಶಿವಕುಮಾರ್ಗೆ ಹಾಸನಾಂಬೆ ಅಭಯ ನೀಡಿದಳೇ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos
ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್
ಕ್ರಾಂತಿ ಕಿಚ್ಚಿನ ಮಧ್ಯೆ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಕೆ
ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ
IND vs PAK: ಪಾಕಿಸ್ತಾನ್ ವಿರುದ್ಧ ಹೀನಾಯವಾಗಿ ಸೋತ ಭಾರತ

