ಫೆಬ್ರುವರಿಯಿಂದ ಭಾರತ ಪ್ರತಿದಿನ 10 ಲಕ್ಷ ಕೋವಿಡ್ ಸೋಂಕಿನ ಪ್ರಕರಣಗಳನ್ನು ಕಾಣಲಿದೆ: ಐಐಎಸ್ಸಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 08, 2022 | 7:13 PM

ಮಹಾರಾಷ್ಟ್ರ ಅತಿಹೆಚ್ಚು ಪ್ರಭಾವಕ್ಕೊಳಗಾಗುವ ರಾಜ್ಯವಾಗಲಿದ್ದು ಪೀಕ್ ಹಂತದಲ್ಲಿ ಅಲ್ಲಿ ಪ್ರತಿದಿನ 1,75,000 ಸೋಂಕಿನ ಪ್ರಕರಣಗಳು ದಾಖಲಾಗಲಿವೆ. ಕಳೆದ ಶುಕ್ರವಾರ ರಾಜ್ಯದಲ್ಲಿ 40,000 ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದವು.

ಒಮೈಕ್ರಾನ್ ರೂಪಾಂತರಿಯಿಂದ ಆರಂಭಗೊಂಡಿರುವ ಕೋವಿಡ್-19 ಪಿಡುಗಿನ ಮೂರನೇ ಅಲೆಯಲ್ಲಿ ಜನೆವರಿ ಅಂತ್ಯ ಮತ್ತು ಫೆಬ್ರುವರಿ ಮೊದಲವಾರದದಲ್ಲಿ ದೇಶದಾದ್ಯಂತ ಪ್ರತಿದಿನ 10 ಲಕ್ಷ ಸೋಂಕಿಗೊಳಗಾಗಲಿದ್ದಾರೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸಂಶೋಧಕರು ಹೇಳಿದ್ದಾರೆ. ಅದು ಮೂರನೇ ಅಲೆಯ ಪೀಕ್ ಹಂತ ಆಗಲಿದ್ದು ಅದಾದ ಬಳಿಕ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಮುಖಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. ಕೋವಿಡ್ ಪ್ರಕರಣಗಳು ಉತ್ತುಂಗ ಹಂತ ತಲುಪುವುದು ಭಾರತದ ಎಲ್ಲಾ ರಾಜ್ಯಗಳಲ್ಲಿ ಒಂದೇ ತೆರನಾಗಿರದೆ ಬೇರೆ ಬೇರೆಯಾಗಿರುತ್ತದೆ. ನಗರ ಪ್ರದೇಶಗಳಲ್ಲೂ ಮೂರನೇ ಅಲೆಯ ಪ್ರಭಾವ ಭಿನ್ನವಾಗಿರುತ್ತದೆ. ಮಾರ್ಚ್ ತಿಂಗಳಲ್ಲಿ ಮೂರನೇ ಅಲೆ ಇಳಿಮುಖ ತಿರುವು ಕಾಣಲಿದೆ ಎಂದು ಐಐಎಸ್ಸಿ ವಿಜ್ಞಾನಿಗಳು ಹೇಳಿದ್ದಾರೆ.

ಮಹಾರಾಷ್ಟ್ರ ಅತಿಹೆಚ್ಚು ಪ್ರಭಾವಕ್ಕೊಳಗಾಗುವ ರಾಜ್ಯವಾಗಲಿದ್ದು ಪೀಕ್ ಹಂತದಲ್ಲಿ ಅಲ್ಲಿ ಪ್ರತಿದಿನ 1,75,000 ಸೋಂಕಿನ ಪ್ರಕರಣಗಳು ದಾಖಲಾಗಲಿವೆ. ಕಳೆದ ಶುಕ್ರವಾರ ರಾಜ್ಯದಲ್ಲಿ 40,000 ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದವು.

ಎರಡು ವಾರಗಳಿಂದ ಮಹಾರಾಷ್ಟ್ರನಲ್ಲಿ ಸೋಂಕಿತರ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದೆ. ಸೋಂಕು ತಾಕಿಸಿಕೊಂಡಿರಬಹುದೆಂದು ಶಂಕಿಸಲಾಗಿರುವ ಅನೇಕರ ಸ್ಯಾಂಪಲ್ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗೆ ಕಳಿಸಲಾಗಿದೆ.

ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರತಿದಿನ ಕ್ರಮವಾಗಿ ಒಂದು ಲಕ್ಷ ಮತ್ತು 80,000 ಸೋಂಕಿನ ಪ್ರಕರಣಗಳು ಬೆಳಕಿಗೆ ಬರಲಿವೆ. ಹಾಗೆಯೇ, ಜನೆವರಿ ಅಂತ್ಯದಲ್ಲಿ ದೆಹಲಿಯಲ್ಲಿ ಪ್ರತಿದಿನ ಸುಮಾರು 70,000 ಸೋಂಕಿನ ಪ್ರಕರಣಗಳು ಪತ್ತೆಯಾಗಲಿವೆ ಅಂತ ಐಐಎಸ್ಸಿ ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ:   ಬಾಯಿ ಮುಚ್ಚಿಕೊಳ್ಳಿ, ಅಧಿಕ ಪ್ರಸಂಗ ಮಾಡಬೇಡ; ಮೈಸೂರಿನಲ್ಲಿ ಚೆಸ್ಕಾಂ ಅಧಿಕಾರಿ ವಿರುದ್ಧ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಗರಂ! ವಿಡಿಯೋ ಇದೆ