ರಾಜ್ಯದೆಲ್ಲೆಡೆ ವಾರಾಂತ್ಯ ಲಾಕ್ಡೌನ್ ಜಾರಿಗೊಂಡರೂ ಬಳ್ಳಾರಿಯಲ್ಲಿ ಮಾತ್ರ ಜನ ಎಂದಿನಂತೆಯೇ ಓಡಾಡುತ್ತಿದ್ದರು!
ಅಂಗಡಿಗಳು ಮುಚ್ಚಿವೆ ಎಂಬ ಅಂಶವೊಂದನ್ನು ಬಿಟ್ಟರೆ ಶನಿವಾದ ಬಳ್ಳಾರಿಯಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆದಿತ್ತು. ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು ಈ ಪಾಟಿ ನಿರ್ಲಕ್ಷ್ಯವಹಿಸುವುದು ಸರಿಯಲ್ಲ. ಸರ್ಕಾರ ಕೇಳಿದರೆ ಅವರಲ್ಲಿ ಏನು ಉತ್ತರವಿದೆಯೋ?
ಕೋವಿಡ್ ಮೂರನೇ ಅಲೆಯಲ್ಲಿ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳನ್ನು ತಡೆಯಲು ಕರ್ನಾಟಕ ಸರ್ಕಾರ ವಾರಾಂತ್ಯದ ಲಾಕ್ ಡೌನ್ ಹೇರಿದೆ ಮತ್ತು ಇದು ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನಿಮಗಿಲ್ಲಿ ಬಳ್ಳಾರಿಯಲ್ಲಿ ಶನಿವಾರ ಲಾಕ್ಡೌನ್ ಪ್ರಭಾವ ಹೇಗಿತ್ತು ಅಂತ ಈ ವಿಡಿಯೋನಲ್ಲಿ ತೋರಿಸ್ತಾ ಇದ್ದೀವಿ. ಗಣಿಗಾರಿಕೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಬಳ್ಳಾರಿಯನ್ನು ‘ರಿಪಬ್ಲಿಕ್ ಆಫ್ ಬಳ್ಳಾರಿ’ ಅಂತ ಉಲ್ಲೇಖಿಸಲಾಗುತಿತ್ತು. ಈ ವಿಡಿಯೋ ನೋಡುತ್ತಿದ್ದರೆ ಆ ಟ್ಯಾಗ್ ಈಗಲೂ ಈ ಬಿಸಿಲುನಾಡಿಗೆ ಅಂಟಿಕೊಂಡಿರುವಂತಿದೆ ಮಾರಾಯ್ರೇ. ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ನಿಯಮ ಬಳ್ಳಾರಿಗೆ ಅನ್ವಯಿಸುತ್ತಿಲ್ಲ.
ಯಾಕೆ ನಾವು ಇದನ್ನು ಹೇಳುತ್ತಿದ್ದೇವೆ ಅಂತ ಗೊತ್ತಾಯ್ತು ತಾನೆ? ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಗೆ ಬಂದರೂ ಬಳ್ಳಾರಿಯಲ್ಲಿ ಜನ ನಿರ್ಭೀತಿಯಿಂದ ತಿರುಗಾಡುತ್ತಿದ್ದಾರೆ. ಕೇವಲ ಅಂಗಡಿ ಮುಂಗಟ್ಟುಗಳು ಮಾತ್ರ ಬಂದ್ ಆಗಿವೆ. ಆಟೋ, ಬಸ್ಸು ರಸ್ತೆಗಳ ಮೇಲೆ ಸಂಚರಿಸುತ್ತಿವೆ. ನಿಮಗೆ ಸಂಚಾರಿ ಪೊಲೀಸರು ಅಲ್ಲಲ್ಲಿ ಕಾಣಿಸುತ್ತಾರೆ. ಮನೆಯಿಂದ ಹೊರಗೆ ಬಂದಿದ್ದು ಯಾಕೆ ಅಂತ ಜನರನ್ನು ಪ್ರಶ್ನಿಸುವ ತೊಂದರೆ ಅವರು ತೆಗೆದುಕೊಳ್ಳುತ್ತಿಲ್ಲ.
ಅಂಗಡಿಗಳು ಮುಚ್ಚಿವೆ ಎಂಬ ಅಂಶವೊಂದನ್ನು ಬಿಟ್ಟರೆ ಶನಿವಾದ ಬಳ್ಳಾರಿಯಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆದಿತ್ತು. ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು ಈ ಪಾಟಿ ನಿರ್ಲಕ್ಷ್ಯವಹಿಸುವುದು ಸರಿಯಲ್ಲ. ಸರ್ಕಾರ ಕೇಳಿದರೆ ಅವರಲ್ಲಿ ಏನು ಉತ್ತರವಿದೆಯೋ?
ಇದನ್ನೂ ಓದಿ: Viral Video: ವೇದಿಕೆಯಲ್ಲೇ ಬಿಜೆಪಿ ಶಾಸಕನ ಕೆನ್ನೆಗೆ ಹೊಡೆದ ರೈತ; ವಿಡಿಯೋ ವೈರಲ್ ಆಗುತ್ತಿದ್ದಂತೆ ತೇಪೆ ಹಚ್ಚಿದ ಎಂಎಲ್ಎ