ಬೆಂಗಳೂರಲ್ಲಿ ವಾಹನಗಳನ್ನು ಜಪ್ತು ಮಾಡಿದ ನಂತರ ಅವುಗಳ ಚಾಲಕರಿಗೆ ಕೋವಿಡ್ ಟೆಸ್ಟ್ ಮಾಡಲಾಯಿತು!
ಅನಾವಶ್ಯಕವಾಗಿ ಹೊರಬಂದವರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದರು. ಅದರ ಜೊತೆಗೆ ಅವರು ಆರೋಗ್ಯ ಕಾರ್ಯಕರ್ತರ ನೆರವಿನೊಂದಿಗೆ ಜಪ್ತಿ ಮಾಡಿದ ವಾಹನಗಳ ಮಾಲೀಕರ ಮತ್ತು ಡ್ರೈವರ್ಗಳ ಕೊವಿಡ್ ಟೆಸ್ಟ್ (ಅರ್ ಟಿ-ಪಿ ಸಿ ಆರ್) ಸಹ ಮಾಡಿಸಿದರು.
ಶನಿವಾರದಂದು ರಾಜ್ಯದೆಲ್ಲೆಡೆ ಪೊಲೀಸರು ಸ್ವಲ್ಪ ಜಾಸ್ತಿಯೇ ಕೆಲಸ ಮಾಡಬೇಕಾಯಿತು ಅನ್ನೋದು ಸುಳ್ಳಲ್ಲ. ನೈಟ್ ಕರ್ಪ್ಯೂ ಜಾರಿಯಲ್ಲಿರುವುದರಿಂದ ಅವರು ರಾತ್ರಿಯೂ ಕೆಲಸ ಮಾಡಬೇಕಿದೆ. ಪೊಲೀಸರು ದಿನದ 24 ಗಂಟೆಗಳ ಕಾಲವೂ ಕಾರ್ಯನಿರತರಾಗಿರುತ್ತಾರೆ ಅದು ಬೇರೆ ವಿಷಯ. ಅದರೆ ಕೋವಿಡ್ ಪಿಡುಗಿನ ದಿನಗಳಲ್ಲಿ ಅವರು ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಕೆಲಸ ಮಾಡಬೇಕಿದೆ. ಎಷ್ಟೇ ಮುಂಜಾಗ್ರತೆ ವಹಿಸಿದರೂ ಎರಡೆರಡು ಡೋಸು ಲಸಿಕೆಗಳನ್ನು ಹಾಕಿಸಿಕೊಂಡಿದ್ದರೂ ಜನರಿಗೆ ಸೋಂಕು ತಗಲುತ್ತಿದೆ. ಹಾಗಾಗಿ ಕರ್ತವ್ಯನಿರತ ಪೊಲೀಸರು ಜನರ ಮೇಲೆ ನಿಗಾ ಇಡುವುದರ ಜೊತೆಗೆ ತಮ್ಮ ಬಗ್ಗೆಯೂ ಇನ್ನೂ ಹೆಚ್ಚು ಕಾಳಜಿವಹಿಸಬೇಕಿದೆ. ಇದೇ ಮಾತು ಆರೋಗ್ಯ ಕಾರ್ಯಕರ್ತರಿಗೂ ಅನ್ವಯಿಸುತ್ತದೆ. ಇವರದ್ದು ಸಹ ಥ್ಯಾಂಕ್ಲೆಸ್ ಕೆಲಸ.
ರಾಜ್ಯದಲ್ಲಿ ಲಾಕ್ಡೌನ್ ಹೇರಿದ್ದರೂ ಶನಿವಾರದಂದು ಜನ ಬೇಕಾಬಿಟ್ಟಿಯಾಗಿ ರಸ್ತೆಗಳ ಮೇಲೆ ಓಡಾಡಲು ಆರಂಭಿಸಿದ್ದರು. ಅನಾವಶ್ಯಕವಾಗಿ ಹೊರಬಂದವರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದರು. ಅದರ ಜೊತೆಗೆ ಅವರು ಆರೋಗ್ಯ ಕಾರ್ಯಕರ್ತರ ನೆರವಿನೊಂದಿಗೆ ಜಪ್ತಿ ಮಾಡಿದ ವಾಹನಗಳ ಮಾಲೀಕರ ಮತ್ತು ಡ್ರೈವರ್ಗಳ ಕೊವಿಡ್ ಟೆಸ್ಟ್ (ಅರ್ ಟಿ-ಪಿ ಸಿ ಆರ್) ಸಹ ಮಾಡಿಸಿದರು.
ನಿಮಗೆ ಇಲ್ಲಿ ಕಾಣುತ್ತಿರುವ ದೃಶ್ಯ ಬೆಂಗಳೂರು ಕೆ ಅರ್ ಮಾರ್ಕೆಟ್ ಫ್ಲೈ ಓವರ್ ಕೆಳಗೆ ಶೂಟ್ ಆಗಿರುವಂಥದ್ದು. ನಿಮಗೆ ಪೊಲೀಸರು ವಾಹನಗಳನ್ನು ಸೀಜ್ ಮಾಡುತ್ತಿರುವುದು ಮತ್ತು ಅರೋಗ್ಯ ಕಾರ್ಯಕರ್ತರು ಕೋವಿಡ್ ಟೆಸ್ಟ್ ಮಾಡುತ್ತಿರುವುದು ವಿಡಿಯೋನಲ್ಲಿ ಕಾಣುತ್ತದೆ.
ಇಲ್ಲೊಬ್ಬ ಯುವಕ ಇದ್ದಾರೆ. ಅನಂತಪುರದಿಂದ ಬಂದಿರುವುದಾಗಿ ಅವರು ಹೇಳುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಲಾಕ್ಡೌನ್ ಮತ್ತು ಕರ್ಫ್ಯೂ ಇನ್ನೂ ಜಾರಿಗೆ ಬಂದಿಲ್ಲ ಅಂತ ಕಾಣುತ್ತೆ. ಅದಲ್ಲದೆ ಈ ಡ್ರೈವರ್ಗೆ ಕರ್ನಾಟಕದಲ್ಲಿ ವೀಕೆಂಡ್ ಲಾಕ್ಡೌನ್ ಜಾರಿಗೊಳಿಸಿದ್ದು ಗೊತ್ತಿರಲಿಕ್ಕಿಲ್ಲ. ಆದರೆ ಯಾರೇನೂ ಮಾಡುವಂತಿಲ್ಲ. ಜನರಿಗೆ ಗೊತ್ತಿರಲಿ ಇಲ್ಲದಿರಲಿ, ನಿಯಮವಂತೂ ಅನ್ವಯವಾಗುತ್ತದೆ.
ಇದನ್ನೂ ಓದಿ: ಅಮಲು ಪದಾರ್ಥ ಏರಿಸಿ ರಸ್ತೆಯಲ್ಲಿ ಚೆನ್ನೈ ಮೂಲದ ಮೆಡಿಕಲ್ ವಿದ್ಯಾರ್ಥಿಗಳು-ವಿದ್ಯಾರ್ಥಿನಿಯ ನಡುವೆ ಹೊಡೆದಾಟ: ವಿಡಿಯೋ