IND vs AUS: ಶಿವಂ ದುಬೆ ತೋಳ್ಬಲಕ್ಕೆ ಕ್ರೀಡಾಂಗಣದಿಂದ ಕಣ್ಮರೆಯಾದ ಚೆಂಡು; ವಿಡಿಯೋ

Updated on: Nov 06, 2025 | 7:13 PM

Shivam Dube six: ಭಾರತ-ಆಸ್ಟ್ರೇಲಿಯಾ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದಿದೆ. ಈ ಪಂದ್ಯದಲ್ಲಿ ಶಿವಂ ದುಬೆ ಬಾರಿಸಿದ 106 ಮೀಟರ್ ಸಿಕ್ಸರ್‌ನಿಂದಾಗಿ ಹೊಸ ಚೆಂಡು ತರಬೇಕಾಯಿತು. ಇದರಿಂದಾಗಿ ಪಂದ್ಯದ ಆಯೋಜಕರಿಗೆ 25,000 ರೂ. ನಷ್ಟವಾಯಿತು. ದುಬೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೀಡಿದ ಕೊಡುಗೆ ತಂಡದ ಗೆಲುವಿಗೆ ಪ್ರಮುಖವಾಗಿತ್ತು.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ತಂಡದ ಸ್ಫೋಟಕ ಆಲ್‌ರೌಂಡರ್ ಶಿವಂ ದುಬೆ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಅಲ್ಪ ಕಾಣಿಕೆ ನೀಡಿದರಾದರೂ ಅದು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿತು. ಮೊದಲು ಬ್ಯಾಟಿಂಗ್​ನಲ್ಲಿ 22 ರನ್ ಬಾರಿಸಿದ ದುಬೆ, ತಮ್ಮ ಇನ್ನಿಂಗ್ಸ್​ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ದುಬೆ ಬಾರಿಸಿದ ಏಕೈಕ ಸಿಕ್ಸರ್​ನಿಂದಾಗಿ ಆಯೋಜಕರಿಗೆ 25 ಸಾವಿರ ರೂ. ನಷ್ಟವಾಗಿದೆ.

ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಶಿವಂ ದುಬೆ, ಆಸೀಸ್ ಸ್ಪಿನ್ನರ್ ಆಡಮ್ ಜಂಪಾ ಅವರ ಓವರ್​ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ದುಬೆ ಅವರ ತೋಳ್ಬಲಕ್ಕೆ ತತ್ತರಿಸಿ ಹೋದ ಚೆಂಡು ಬರೋಬ್ಬರಿ 106 ಮೀಟರ್ ದೂರ ಹೋಗಿ ಬಿತ್ತು. ಅಂದರೆ ಚೆಂಡು ಕ್ರೀಡಾಂಗಣವನ್ನು ದಾಟಿ ಆಚೆ ಹೋಯಿತು. ಇದರಿಂದಾಗಿ ಅಂಪೈರ್​ಗಳು ಬೇರೆ ಚೆಂಡನ್ನು ತರಿಸಬೇಕಾಯಿತು. ವಾಸ್ತವವಾಗಿ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬಳಸುವ ಚೆಂಡಿನ ಬೆಲೆ ಸುಮಾರು 25,000 ರೂಪಾಯಿಗಳಾಗಿದ್ದು, ದುಬೆ ಅವರ ಈ ಸಿಕ್ಸರ್​ನಿಂದಾಗಿ ಆಯೋಜಕರಿಗೆ 25 ಸಾವಿರ ರೂ. ನಷ್ಟವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ