ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ, ನಟಿ ಸಾನ್ಯಾ ಐಯ್ಯರ್ ಹೇಳಿದ್ದೇನು?

|

Updated on: Feb 23, 2025 | 2:38 PM

India vs Pakistan: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇಂದು (ಫೆಬ್ರವರಿ 23) ಭಾರತ ಮತ್ತು ಪಾಕಿಸ್ತಾನ ನಡುವೆ ಏಕದಿನ ಪಂದ್ಯ ನಡೆಯುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರ ಪಂದ್ಯಾಟ ಆಡುವುದನ್ನು ಇಡೀ ದೇಶವೆ ನೋಡುತ್ತಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಸಾನ್ಯಾ ಐಯ್ಯರ್ ಸಹ ಕ್ರಿಕೆಟ್ ಅಭಿಮಾನಿ ಆಗಿದ್ದು, ಇಂದಿನ ಪಂದ್ಯದ ಬಗ್ಗೆ ಮಾತನಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಪಂದ್ಯ ನಡೆಯುತ್ತಿದೆ. ದುಬೈನಲ್ಲಿ ಪಂದ್ಯ ನಡೆಯುತ್ತಿದ್ದು, ವಿಶ್ವದಾದ್ಯಂತ ಜನ ಟಿವಿ ಮುಂದೆ ಕೂತು ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಭಾರತದಲ್ಲಿಯಂತೂ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಪಂದ್ಯ ಇದು. ಸಿನಿಮಾ ಸೆಲೆಬ್ರಿಟಿಗಳು ಸಹ ಭಾರತ ಕ್ರಿಕೆಟ್ ತಂಡಕ್ಕೆ ಶುಭ ಹಾರೈಕೆಗಳನ್ನು ನೀಡಿದ್ದಾರೆ. ಮಾಜಿ ಬಿಗ್​ಬಾಸ್ ಸ್ಪರ್ಧಿ, ನಟಿ ಸಾನ್ಯಾ ಐಯ್ಯರ್ ಅವರು ಸಹ ಭಾರತ ತಂಡಕ್ಕೆ ಶುಭ ಹಾರೈಕೆ ಮಾಡಿದ್ದು, ಇಡೀ ವಿಶ್ವವೇ ಎದುರು ನೋಡುತ್ತಿದ್ದ ಪಂದ್ಯ ಇದು. ಭಾರತ-ಪಾಕಿಸ್ತಾನ ಪಂದ್ಯವೆಂದರೆ ಊಟ, ನಿದ್ದೆ ಬಿಟ್ಟು ಪಂದ್ಯ ನೋಡುತ್ತೇವೆ. ಇಂದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 23, 2025 02:38 PM