ಭಾರತ-ಪಾಕಿಸ್ತಾನ ಪಂದ್ಯ, ಶುಭ ಹಾರೈಸಿದ ಶ್ರೀಮುರಳಿ, ಶರಣ್ ಹೇಳಿದ್ದೇನು?
India vs Pakistan: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇಂದು (ಫೆಬ್ರವರಿ 23) ಭಾರತ ಮತ್ತು ಪಾಕಿಸ್ತಾನ ನಡುವೆ ಏಕದಿನ ಪಂದ್ಯ ನಡೆಯುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರ ಪಂದ್ಯಾಟ ಆಡುವುದನ್ನು ಇಡೀ ದೇಶವೆ ನೋಡುತ್ತಿದೆ. ನಟರಾದ ಶ್ರೀಮುರಳಿ ಮತ್ತು ಶರಣ್ ಇಂದಿನ ಪಂದ್ಯದ ಬಗ್ಗೆ ಹೇಳಿದ್ದೇನು? ಇಲ್ಲಿದೆ ವಿಡಿಯೋ...
ಇಂದು (ಫೆಬ್ರವರಿ 23) ಭಾರತ ಮತ್ತು ಪಾಕಿಸ್ತಾನ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಎರಡೂ ತಂಡಗಳಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಭಾರತ ಈಗಾಗಲೇ ಮೊದಲ ಪಂದ್ಯ ಗೆದ್ದಿದ್ದರೆ, ಪಾಕಿಸ್ತಾನ ಮೊದಲ ಪಂದ್ಯ ಸೋತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಸಹಜವಾಗಿಯೇ ಜೋಶ್ ಹೆಚ್ಚಾಗಿರುತ್ತದೆ. ಎರಡೂ ದೇಶಗಳ ಜನ ಕೆಲಸ ಕಾರ್ಯ ಬಿಟ್ಟು ಟಿವಿ ಮುಂದೆ ಆಸೀನರಾಗಿ ಪಂದ್ಯ ವೀಕ್ಷಣೆ ಮಾಡುತ್ತಾರೆ. ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ದೇಶದ ಹಲೆವೆಡೆ ಅಭಿಮಾನಿಗಳು ಹೋಮ-ಹವನ ಮಾಡಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಸಹ ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ. ನಟರಾದ ಶ್ರೀಮುರಳಿ, ಶರಣ್ ಅವರುಗಳು ಇಂದಿನ ಪಂದ್ಯದ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ