43 ಎಸೆತಗಳಲ್ಲಿ 68 ರನ್ ಚಚ್ಚಿದ ಹರ್ಮನ್‌ಪ್ರೀತ್ ಕೌರ್
Harmanpreet Kaur T20 half-century: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅದ್ಭುತ 68 ರನ್ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ 175 ರನ್ ಗಳಿಸಿತು. ಇದು ಹರ್ಮನ್‌ಪ್ರೀತ್ ಅವರ 15ನೇ ಟಿ20 ಅರ್ಧಶತಕವಾಗಿದೆ. ಅಮನ್‌ಜೋತ್ ಕೌರ್ ಜೊತೆಗೂಡಿ ಉತ್ತಮ ಪಾಲುದಾರಿಕೆ ನೀಡಿದರು.
ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 175 ರನ್ ಕಲೆಹಾಕಿದೆ. ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ನಾಯಕಿ ಹರ್ಮನ್‌ಪ್ರೀತ್ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಅವರ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದ 15 ನೇ ಅರ್ಧಶತಕವಾಗಿದೆ. ಹಾಗೆಯೇ ಹರ್ಮನ್ ಮತ್ತು ಅಮನ್‌ಜೋತ್ ಕೌರ್ 37 ಎಸೆತಗಳಲ್ಲಿ 61 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಅಂತಿಮವಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 68 ರನ್ ಗಳಿಸಿದರು. ನಂತರ ಅರುಂಧತಿ ರೆಡ್ಡಿ ಅದ್ಭುತ ಬ್ಯಾಟಿಂಗ್ ಮಾಡಿ ಭಾರತವನ್ನು 170 ರನ್‌ಗಳ ಗಡಿ ದಾಟಿಸಿದರು. ಅರುಂಧತಿ 11 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 27 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೆ ಸ್ನೇಹ್ ರಾಣಾ ಆರು ಎಸೆತಗಳಲ್ಲಿ ಒಂದು ಬೌಂಡರಿ ಸೇರಿದಂತೆ ಎಂಟು ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

