ನರೇಂದ್ರ ಮೋದಿ ಪುನಃ ಪ್ರಧಾನ ಮಂತ್ರಿಯಾದರೆ ಅಭಿವೃದ್ಧಿಯಲ್ಲಿ ಭಾರತ ಅಮೆರಿಕವನ್ನು ಹಿಂದಿಕ್ಕಲಿದೆ: ಗಾಲಿ ಜನಾರ್ಧನ ರೆಡ್ಡಿ

|

Updated on: Mar 30, 2024 | 10:57 AM

ಗಂಗಾವತಿಯಿಂದ ಕೆಆರ್ ಪಿಪಿಯ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವನಣೆಯಲ್ಲಿ ಸ್ಪರ್ಧಿಸಿದಾಗ ತನ್ನ ಗೆಲುವಿಗೆ ಶೇಕಡ 50 ರಷ್ಟು ಬಿಜೆಪಿ ಕಾರ್ಯಕರ್ತರು ಕಾರಣರಾದರೆ ಉಳಿದ 50 ಪರ್ಸೆಂಟ್ ನಷ್ಟು ಕಾಂಗ್ರೆಸ್ ಕಾರ್ಯಕರ್ತರು ಕಾರಣರಾದರು ಅಂತ ಹೇಳಿ ರೆಡ್ಡಿ ಆಶ್ಚರ್ಯ ಮೂಡಿಸಿದರು.

ಕೊಪ್ಪಳ: ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಯಾವುದೇ ಮತೀಯ ಗಲಭೆ ಭಾರತದಲ್ಲಿ ನಡೆಯದೆ ದೇಶವು ಶಾಂತಿಯುವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕಾರಣ ಎಂದು ಬಿಜೆಪಿ ಮುಖಂಡ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು (Gali Janardhan Reddy). ನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ರೆಡ್ಡಿ, ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾದರೆ ಭಾರತ ಅತ್ಯಂತ ಅಭಿವೃದ್ಧಿ ರಾಷ್ಟ್ರ ಎನಿಸಿಕೊಂಡು ಅಮೆರಿಕವನ್ನೂ (US) ಹಿಂದಕ್ಕಿಲಿದೆ ಎಂದು ಹೇಳಿದರು. ಗಂಗಾವತಿಯಿಂದ ಕೆಆರ್ ಪಿಪಿಯ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವನಣೆಯಲ್ಲಿ ಸ್ಪರ್ಧಿಸಿದಾಗ ತನ್ನ ಗೆಲುವಿಗೆ ಶೇಕಡ 50 ರಷ್ಟು ಬಿಜೆಪಿ ಕಾರ್ಯಕರ್ತರು ಕಾರಣರಾದರೆ ಉಳಿದ 50 ಪರ್ಸೆಂಟ್ ನಷ್ಟು ಕಾಂಗ್ರೆಸ್ ಕಾರ್ಯಕರ್ತರು ಕಾರಣರಾದರು ಅಂತ ಹೇಳಿ ರೆಡ್ಡಿ ಆಶ್ಚರ್ಯ ಮೂಡಿಸಿದರು.

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ತಾನ್ಯಾವತ್ತೂ ಭೇದಭಾವ ಮಾಡಲಾರೆ ಅನ್ನೋದನ್ನು ಸೂಚಿಸುವುದಕ್ಕೆ ರೆಡ್ಡಿಯವರು ತಾವು ತಾಯಿ ಎಂದು ಪರಿಗಣಿಸುತ್ತಿದ್ದ ಸುಷ್ಮಾ ಸ್ವರಾಜ್ ಅವರು ಹೇಳಿದ ಮಾತನ್ನು ಜ್ಞಾಪಿಸಿಕೊಂಡರು; ‘ಹಿಂದೂ-ಮುಸ್ಲಿಂ ಭಾಯಿ ಭಾಯಿ ಭಾರತಮಾತೆ ನಮ್ಮೆಲ್ಲರ ತಾಯಿ’ ಎಂದು ದಿವಂಗತ ಬಿಜೆಪಿ ನಾಯಕಿ ಹೇಳಿದ್ದರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ 11 ಕೋಟಿ ರೂ. ಬಿಡುಗಡೆ ಮಾಡಿದ್ದು ನಾನು: ಗಾಲಿ ಜನಾರ್ಧನ ರೆಡ್ಡಿ, ಕೆಆರ್ ಪಿಪಿ ಅಧ್ಯಕ್ಷ

Follow us on