IND vs AUS: ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ

|

Updated on: Dec 02, 2024 | 10:37 PM

IND vs AUS: ನಾಯಕಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ವನಿತಾ ಪಡೆ ಮುಂಬೈನಿಂದ ವಿಮಾನ ಪ್ರಯಾಣ ಆರಂಭಿಸಿದ್ದು, ಇಂದು ಆಸ್ಟ್ರೇಲಿಯಾದ ಬ್ರಿಸ್ಬೇನ್‌ಗೆ ತಲುಪಿದೆ. ಮಹಿಳಾ ಪಡೆ ಆಸ್ಟ್ರೇಲಿಯಾ ತಲುಪಿದ ವಿಡಿಯೋವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಒಂದೆಡೆ ಭಾರತ ಪುರುಷರ ತಂಡ ಆಸ್ಟ್ರೇಲಿಯಾದಲ್ಲಿ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೊಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ಭಾರತ ಮಹಿಳಾ ಕ್ರಿಕೆಟ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಕಣಕ್ಕಿಳಿಯಲು ಆಸ್ಟ್ರೇಲಿಯಾ ಪ್ರವಾಸ ಮಾಡಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ವನಿತಾ ಪಡೆ ಮುಂಬೈನಿಂದ ವಿಮಾನ ಪ್ರಯಾಣ ಆರಂಭಿಸಿದ್ದು, ಇಂದು ಆಸ್ಟ್ರೇಲಿಯಾದ ಬ್ರಿಸ್ಬೇನ್‌ಗೆ ತಲುಪಿದೆ. ಮಹಿಳಾ ಪಡೆ ಆಸ್ಟ್ರೇಲಿಯಾ ತಲುಪಿದ ವಿಡಿಯೋವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಆಸ್ಟ್ರೇಲಿಯಾದಲ್ಲಿ ಭಾರತದ ಸಾಧನೆ

ಆಸ್ಟ್ರೇಲಿಯ ನೆಲದಲ್ಲಿ ಭಾರತ ಮಹಿಳಾ ಏಕದಿನ ಪಂದ್ಯಗಳಲ್ಲಿ 16 ಬಾರಿ ಆಸ್ಟ್ರೇಲಿಯಾವನ್ನು ಎದುರಿಸಿದೆ. ಈ ಪೈಕಿ ಭಾರತ ಗೆದ್ದಿರುವುದು ನಾಲ್ಕು ಬಾರಿ ಮಾತ್ರ. ಸೆಪ್ಟೆಂಬರ್ 2021 ರಲ್ಲಿ ನಡೆದ ಆಸ್ಟ್ರೇಲಿಯಾದ ಹಿಂದಿನ ಪ್ರವಾಸದಲ್ಲಿ, ಭಾರತವು 1-2 ರಿಂದ ಸರಣಿಯನ್ನು ಕಳೆದುಕೊಂಡಿತು.

ಏಕದಿನ ಸರಣಿ ವೇಳಾಪಟ್ಟಿ

  1. ಮೊದಲ ಏಕದಿನ: ಡಿಸೆಂಬರ್ 5, ಬ್ರಿಸ್ಬೇನ್. ಭಾರತೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಆರಂಭ
  2. ಎರಡನೇ ಏಕದಿನ: ಡಿಸೆಂಬರ್ 8, ಬ್ರಿಸ್ಬೇನ್. 5:30 am ಭಾರತೀಯ ಕಾಲಮಾನ ಮುಂಜಾನೆ 5:30ಕ್ಕೆ ಆರಂಭ
  3. ಮೂರನೇ ಏಕದಿನ: ಡಿಸೆಂಬರ್ 11, ಪರ್ತ್. ಭಾರತೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ ಆರಂಭ

ಉಭಯ ತಂಡಗಳು

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಪ್ರಿಯಾ ಪುನಿಯಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸ್ಸಾಬ್ನಿಸ್, ದೀಪ್ತಿ ಶರ್ಮಾ, ಮೀನು ಮಣಿ, ಪ್ರಿಯಾ ಮಿಶ್ರಾ, ರಾಧಾ ಯಾದವ್, ಅರುಂಧತಿ ರೆಡ್ಡಿ, ಟಿಟಾಸ್ ಸಾಧು, ರೇಣುಕಾ ಸಿಂಗ್ ಠಾಕೂರ್, ಸೈಮಾ ಠಾಕೂರ್, ಉಮಾ ಛೆಟ್ರಿ (ವಿಕೆಟ್ ಕೀಪರ್).

ಆಸ್ಟ್ರೇಲಿಯಾ ತಂಡ: ಡಾರ್ಸಿ ಬ್ರೌನ್, ಆಶ್ಲೇ ಗಾರ್ಡ್ನರ್, ಕಿಮ್ ಗಾರ್ತ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್ (ನಾಯಕಿ), ಸೋಫಿ ಮೊಲಿನಿಕ್ಸ್, ಬೆತ್ ಮೂನಿ, ಎಲ್ಲಿಸ್ ಪೆರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೋಲ್ ಮತ್ತು ಜಾರ್ಜಿಯಾ ವೇರ್ಹ್ಯಾಮ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ