Daily Horoscope: ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಮಂಗಳವಾರದ ನಿತ್ಯ ಪಂಚಾಂಗದ ಪ್ರಕಾರ, ಮಾರ್ಗಶಿರ ಮಾಸದಲ್ಲಿ ಶುಭ ಸಮಯಗಳು ಮತ್ತು ಅಶುಭ ಸಮಯಗಳನ್ನು ವಿವರಿಸಲಾಗಿದೆ. ಬಿದಿಗೆ ತಿಥಿ, ಮೂಲ ನಕ್ಷತ್ರ, ಶೂಲ ಯೋಗ, ಮತ್ತು ಇತರ ಜ್ಯೋತಿಷ್ಯ ಮಾಹಿತಿಯನ್ನು ಒಳಗೊಂಡಿದೆ. ಶುಭ ಸಮಯ ಮತ್ತು ದುರ್ಮುಹೂರ್ತದ ಸಮಯವನ್ನು ಸಹ ನೀಡಲಾಗಿದೆ. ಈ ದಿನ ಒಳ್ಳೆಯದನ್ನು ನಿರೀಕ್ಷಿಸಬಹುದು ಎಂದು ಹೇಳಲಾಗಿದೆ.
ನಿತ್ಯಪಂಚಾಂಗ: ಮಂಗಳವಾರ, ಶ್ರೀ ಕ್ರೋಧಿ ನಾಮ ಸಂವತ್ಸರ, ಮಾರ್ಗಶಿರ ಮಾಸ, ಶರದ್ ಋತು, ದಕ್ಷಿಣಾಯಣ, ಸೂರ್ಯೋದಯ ಬೆಳಗ್ಗೆ 06:27ಕ್ಕೆ, ಸೂರ್ಯಾಸ್ತ ಸಂಜೆ 05:52 ಕ್ಕೆ, ಬಿದಿಗೆ ತಿಥಿ 01:09 ತನಕ ನಂತರ ತದಿಗೆ ತಿಥಿ ಆರಂಭವಾಗಲಿದೆ. ಮೂಲ ನಕ್ಷತ್ರ ಸಂಜೆ 04:42 ತನಕ ನಂತರ ಪೂರ್ಣ ಆಷಾಡ ಆರಂಭವಾಗಲಿದೆ. ಶೂಲ ಯೋಗ ಮಧ್ಯಾಹ್ನ 03:08 ತನಕ ನಂತರ ಗಂಡ ಯೋಗ ಆರಂಭವಾಗಲಿದೆ. ಬಾಲವ ಕರಣ ಬೆಳಗ್ಗೆ 12:59 ತನಕ ನಂತರ ಕೌಲವ ಮಧ್ಯಾಹ್ನ 01:09 ತನಕ ನಂತರ ತೈತಲೆ ಆರಂಭವಾಗಲಿದೆ. ಶುಭ ಸಮಯ ಬೆಳಗ್ಗೆ 10:03 ರಿಂದ 11:42ರವರೆಗೆ. ದುರ್ಮುಹೂರ್ತ ಬೆಳಗ್ಗೆ 09:00 ರಿಂದ 10:30 ತನಕ ಇರಲಿದೆ.
ಈ ರಾಶಿಯವರ ಜೀವನದಲ್ಲಿ ಸಮೃದ್ಧಿ ಮತ್ತು ಅನುಕೂಲತೆಸಂಪತ್ತು ಮತ್ತು ಖ್ಯಾತಿಯನ್ನು ಹೆಚ್ಚಾಗುತ್ತದೆ. ರೋಗಗಳಿಂದ ಮುಕ್ತಿ ಮತ್ತು ದೀರ್ಘಾಯುಷ್ಯ ದೊರೆಯುತ್ತದೆ. ಸುಬ್ರಹ್ಮಣ್ಯೇಶ್ವರ ಸ್ವಾಮಿಯ ಕೃಪೆ ಲಭಿಸಲಿದ್ದು, ಹಾವುಗಳ ಭಯ ದೂರವಾಗುತ್ತದೆ.