Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG, ICC World Cup: ಇಂದು ಭಾರತದ ಪಂದ್ಯ: ಬೆಳಗ್ಗೆಯೇ ಏಕಾನ ಸ್ಟೇಡಿಯಂ ಎದುರು ಜಮಾಯಿಸಿದ ಅಭಿಮಾನಿಗಳು

IND vs ENG, ICC World Cup: ಇಂದು ಭಾರತದ ಪಂದ್ಯ: ಬೆಳಗ್ಗೆಯೇ ಏಕಾನ ಸ್ಟೇಡಿಯಂ ಎದುರು ಜಮಾಯಿಸಿದ ಅಭಿಮಾನಿಗಳು

Vinay Bhat
|

Updated on: Oct 29, 2023 | 11:41 AM

Indian fans in Ekana Stadium: ಐಸಿಸಿ ಏಕದಿನ ವಿಶ್ವಕಪ್​ನಲ್ಲಿಂದು ಭಾರತ ಹಾಗೂ ಜೋಸ್ ಬಬ್ಲರ್ ನೇತೃತ್ವದ ಇಂಗ್ಲೆಂಡ್ ಮುಖಾಮುಖಿ ಆಗಲಿದೆ. ಏಕಾನ ಸ್ಟೇಡಿಯಂ ಎದುರು ಬೆಳಗ್ಗಿನಿಂದಲೇ ಅಭಿಮಾನಿಗಳು ಸೇರಿದ್ದಾರೆ. ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ ಘೋಷಣೆ ಕೂಗಿ ಸ್ಟೇಡಿಯಂ ಒಳ ಪ್ರವೇಶಿಸಲು ಫ್ಯಾನ್ಸ್ ಕಾದು ಕುಳಿತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐಸಿಸಿ ಏಕದಿನ ವಿಶ್ವಕಪ್​ನಲ್ಲಿಂದು ನಡೆಯಲಿರುವ 29ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಜೋಸ್ ಬಬ್ಲರ್ ನೇತೃತ್ವದ ಇಂಗ್ಲೆಂಡ್ (India vs England) ಮುಖಾಮುಖಿ ಆಗಲಿದೆ. ಲಖನೌದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ, ಏಕಾನ ಸ್ಟೇಡಿಯಂ ಎದುರು ಬೆಳಗ್ಗಿನಿಂದಲೇ ಅಭಿಮಾನಿಗಳು ಸೇರಿದ್ದಾರೆ. ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ ಘೋಷಣೆ ಕೂಗಿ ಸ್ಟೇಡಿಯಂ ಒಳ ಪ್ರವೇಶಿಸಲು ಫ್ಯಾನ್ಸ್ ಕಾದು ಕುಳಿತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಂಗ್ಲರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಇತ್ತ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಟೀಮ್ ಇಂಡಿಯಾ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ