ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕರ ಗೋಳಾಟ ನೋಡಿ!

Updated By: ಗಂಗಾಧರ​ ಬ. ಸಾಬೋಜಿ

Updated on: Dec 04, 2025 | 9:10 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್​​ಗೆ ದೆಹಲಿಯಿಂದ ಬರಬೇಕಿದ್ದ ಇಂಡಿಗೋ ವಿಮಾನ 12 ಗಂಟೆ ವಿಳಂಬದಿಂದ ಪ್ರಯಾಣಿಕರು ಪರದಾಡಿದ್ದಾರೆ. 3 ದಿನದಲ್ಲಿ ಇಂಡಿಗೋ ವಿಮಾನಗಳ 205 ಸಂಚಾರ ರದ್ದಾಗಿದೆ. ವಿಮಾನಗಳು ನಿಂತಲ್ಲೇ ನಿಂತಿದ್ರೆ, ಪ್ರಯಾಣಿಕರು ಡಿಪಾರ್ಚರ್​​​ ಗೇಟ್​​​ ಬಳಿ ಕೂರಲು ಜಾಗವಿಲ್ಲದೆ ದಿಕ್ಕೆಟ್ಟಿದ್ರು.

ದೇವನಹಳ್ಳಿ, ಡಿಸೆಂಬರ್​ 04: ಇಂದು ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನಲೆ ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ 3 ದಿನದಲ್ಲಿ ಇಂಡಿಗೋ ವಿಮಾನಗಳ 205 ಸಂಚಾರ ರದ್ದಾಗಿದೆ. ವಿಮಾನಗಳು ನಿಂತಲ್ಲೇ ನಿಂತಿದ್ರೆ, ಪ್ರಯಾಣಿಕರು ಡಿಪಾರ್ಚರ್​​​ ಗೇಟ್​​​ ಬಳಿ ಕೂರಲು ಜಾಗವಿಲ್ಲದೆ ದಿಕ್ಕೆಟ್ಟಿದ್ದರು. ಯಾವುದೇ ಮಾಹಿತಿ ಕೊಡುತ್ತಿಲ್ಲ ಅಂತಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.