ನಿರಂತರ ಬೆದರಿಕೆ; ದರ್ಶನ್ ಹಿಂಬಾಲಕ ವಿರುದ್ಧ ಸೈಬರ್ ಪೊಲೀಸರಿಗೆ ಇಂದ್ರಜಿತ್ ದೂರು
ಇಂದು (ಜುಲೈ 19) ಇಂದ್ರಜಿತ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದಕ್ಕೆ ಕಾರಣ ಅವರಿಗೆ ಬರುತ್ತಿರುವ ಬೆದರಿಕೆಗಳು. ಕಳೆದ 24 ಗಂಟೆಯಲ್ಲಿ ಪ್ರತಿ 30 ಸೆಕೆಂಡ್ಗೆ ಒಂದು ಕರೆ ಬರ್ತಿದೆ. ಅಶ್ಲೀಲ ಚಿತ್ರಗಳಲ್ಲದೆ, ಅಶ್ಲೀಲ ಮೆಸೇಜ್ಕೂಡ ಬರ್ತಿದೆ ಎಂದಿದ್ದಾರೆ ಇಂದ್ರಜಿತ್.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಗೂ ನಟ ದರ್ಶನ್ ನಡುವಿನ ತಿಕ್ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರವಾಗುತ್ತಿಲ್ಲ. ಇಂದ್ರಜಿತ್ ಮಾಡುವ ಆರೋಪಕ್ಕೆ ದರ್ಶನ್ ಉತ್ತರ ನೀಡಿದರೆ, ದರ್ಶನ್ ಮಾಡುವ ಪ್ರತ್ಯಾರೋಪಕ್ಕೆ ಇಂದ್ರಜಿತ್ ಉತ್ತರಿಸುತ್ತಿದ್ದಾರೆ. ಹೀಗಾಗಿ, ಇಬ್ಬರ ನಡುವಿನ ಕಿತ್ತಾಟ ಮುಂದುವರಿಯುತ್ತಲೇ ಇದೆ. ಇಂದು (ಜುಲೈ 19) ಇಂದ್ರಜಿತ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದಕ್ಕೆ ಕಾರಣ ಅವರಿಗೆ ಬರುತ್ತಿರುವ ಬೆದರಿಕೆಗಳು. ‘ಕಳೆದ 24 ಗಂಟೆಯಲ್ಲಿ ಪ್ರತಿ 30 ಸೆಕೆಂಡ್ಗೆ ಒಂದು ಕರೆ ಬರ್ತಿದೆ. ಅಶ್ಲೀಲ ಚಿತ್ರಗಳಲ್ಲದೆ, ಅಶ್ಲೀಲ ಮೆಸೇಜ್ಕೂಡ ಬರ್ತಿದೆ. ಹೀಗಾಗಿ ಸೈಬರ್ ಕ್ರೈಮ್ಗೆ ದೂರು ನೀಡುತ್ತಿದ್ದೇನೆ. ಅವರಿಗೆ ಪಾಠ ಕಲಿಸುತ್ತೇನೆ’ ಎಂದು ಎಚ್ಚರಿಸಿದ್ದಾರೆ ಇಂದ್ರಜಿತ್.
Published on: Jul 19, 2021 03:28 PM
Loading...
Unable to load recommendations.
Follow Us

