ಶಿವಮೊಗ್ಗ ಗಲಭೆ: ಅಮಾಯಕರಿಗೆ ಶಿಕ್ಷೆಯಾಗದು ಅಂತ ಮುಸ್ಲಿಂ ಮಹಿಳೆಯರಿಗೆ ಭರವಸೆ ನೀಡಿದ ಸಚಿವ ಮಧು ಬಂಗಾರಪ್ಪ

|

Updated on: Oct 03, 2023 | 12:27 PM

ನಿಮ್ಮ ಮಕ್ಕಳು ಅಮಾಯಕರಾಗಿದ್ದರೆ ಅವರಿಗೆ ಶಿಕ್ಷೆಯಾಗುವುದಿಲ್ಲ, ಕೆಲವರನ್ನು ಕೇವಲ ವಿಚಾರಣೆಗಾಗಿ ಪೊಲೀಸರು ಕರೆದೊಯ್ದಿರುತ್ತಾರೆ, ಅವರು ಮನೆಗೆ ವಾಪಸ್ಸಾಗುತ್ತಾರೆ, ಚಿಂತೆ ಬೇಡ ಎಂದು ಮಧು ಬಂಗಾರಪ್ಪ ಮುಸ್ಲಿಂ ಮಹಿಳೆಯರಿಗೆ ಭರವಸೆ ನೀಡಿದರು.

ಶಿವಮೊಗ್ಗ: ಕೇವಲ ಹಿಂದೂಗಳ ಮನೆಗಳಿಗೆ ಮಾತ್ರ ಸಚಿವರು ಭೇಟಿ ನೀಡಿ ಅವರ ಕಷ್ಟ ಸುಖ ವಿಚಾರಿಸುತ್ತಿದ್ದಾರೆ ಅಂತ ನಗರದ ರಾಗಿಗುಡ್ಡ ಪ್ರದೇಶದಲ್ಲಿ ವಾಸವಾಗಿರುವ ಮುಸ್ಲಿಂ ಮಹಿಳೆಯರ (Muslim women) ದೂರುತ್ತಿದ್ದಂತೆಯೇ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಅವರನ್ನು ಮಾತಾಡಿಸಿ ಅವರಿಗಾದ ತೊಂದರೆಗಳನ್ನು ವಿಚಾರಿಸಿದರು. ಹಲವಾರು ಮುಸ್ಲಿಂ ಮಹಿಳೆಯರು, ಕಾರಲ್ಲಿ ಕುಳಿತೇ ಮಾತಾಡಿದ ಸಚಿವರ ಮುಂದೆ ನೋವು ತೋಡಿಕೊಂಡರು. ಪೊಲೀಸರರು ವಿನಾಕಾರಣ ತಮ್ಮ ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾರೆ, ಮನೆಗಳಲ್ಲಿ ಮಲಗಿದ್ದವರನ್ನು ಠಾಣೆಗೆ ಎಳೆದುಕೊಂಡು (taken custody) ಹೋಗುತ್ತಿದ್ದಾರೆ, ಬಂಧನಕ್ಕೊಳಗಾಗಿರುವ ಮಕ್ಕಳು ಮೂರು ದಿನಗಳಿಂದ ಎಲ್ಲಿದ್ದಾರೆ ಅಂತ ಗೊತ್ತಿಲ್ಲ, ಯಾರೋ ಮಾಡಿದ ತಪ್ಪಿಗೆ ತಮ್ಮ ಮಕ್ಕಳು ಶಿಕ್ಷೆ ಅನುಭವಿಸುತ್ತಿದ್ದಾರೆ ಅಂತ ಹೇಳಿದರು. ನಿಮ್ಮ ಮಕ್ಕಳು ಅಮಾಯಕರಾಗಿದ್ದರೆ ಅವರಿಗೆ ಶಿಕ್ಷೆಯಾಗುವುದಿಲ್ಲ, ಕೆಲವರನ್ನು ಕೇವಲ ವಿಚಾರಣೆಗಾಗಿ ಪೊಲೀಸರು ಕರೆದೊಯ್ದಿರುತ್ತಾರೆ, ಅವರು ಮನೆಗೆ ವಾಪಸ್ಸಾಗುತ್ತಾರೆ, ಚಿಂತೆ ಬೇಡ ಎಂದು ಬಂಗಾರಪ್ಪ ಮುಸ್ಲಿಂ ಮಹಿಳೆಯರಿಗೆ ಭರವಸೆ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on