ಕಲಬುರಗಿಯಿಂದ ಕೇದಾರನಾಥಕ್ಕೆ 70 ವರ್ಷ ವಯಸ್ಸಿನ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
70 ವರ್ಷದ ವ್ಯಕ್ತಿಯೊಬ್ಬರು ಮತ್ತು ಅವರ ಸಂಗಡಿಗರು ಕರ್ನಾಟಕದಿಂದ ಕಲಬುರಗಿಯಿಂದ ಕೇದಾರನಾಥಕ್ಕೆ 2,200 ಕಿ.ಮೀ ಪಾದಯಾತ್ರೆ ಮಾಡಿ, ಸುಮಾರು ಎರಡು ತಿಂಗಳಲ್ಲಿ ದೇವಾಲಯವನ್ನು ತಲುಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕರ್ನಾಟಕದ ವ್ಯಕ್ತಿ ಜತೆ ಸ್ಥಳೀಯರು ಮಾತನಾಡಿಸಿದ್ದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ.
ಬೆಂಗಳೂರು, ಮೇ 15: ಕರ್ನಾಟಕದ ಕಲಬುರಗಿ ಜಿಲ್ಲೆಯ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸುಮಾರು ಎರಡು ತಿಂಗಳ ಅವಧಿಯಲ್ಲಿ ನೂರಾರು ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲೇ ಕ್ರಮಿಸಿ ಉತ್ತರಾಖಂಡದ ಕೇದಾರನಾಥ ತಲುಪಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸಹ ಯಾತ್ರಿಕರ ಗುಂಪಿನೊಂದಿಗೆ ಮಾರ್ಚ್ 3 ರಂದು ಕಲಬುರಗಿಯಿಂದ ಪಾದಯಾತ್ರೆ ಪ್ರಾರಂಭಿಸಿದ್ದಾಗಿ 70 ರ್ಷ ವಯಸ್ಸಿನ ಭಕ್ತ ವೈರಲ್ ಆಗಿರುವ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಯಾತ್ರಿಕರ ತಂಡವು ಮೇ 1 ರಂದು ಪವಿತ್ರ ಕೇದಾರನಾಥ ದೇಗುಲವನ್ನು ತಲುಪಿತ್ತು ಎನ್ನಲಾಗಿದೆ. ಎರಡು ತಿಂಗಳ ಅವಧಿಯಲ್ಲಿ ಈ ಯಾತ್ರಿಕರ ಗುಂಪು ಬಯಲು, ಕಾಡುಗಳು ಮತ್ತು ಪರ್ವತ ಪ್ರದೇಶಗಳ ಮೂಲಕ ಪಾದಯಾತ್ರೆ ಮಾಡಿ 2,200 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದೆ ಎನ್ನಲಾಗಿದೆ. ವೈರಲ್ ವಿಡಿಯೋ ಇಲ್ಲಿದೆ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ