ತುಂಗಭದ್ರಾ ಡ್ಯಾಂ ಗೇಟ್​ ಅಳವಡಿಕೆ ಯಶಸ್ವಿ; ಹಗಲಿರುಳು ಶ್ರಮಿಸಿದ ಕಾರ್ಮಿಕರಿಗೆ ಸನ್ಮಾನ

|

Updated on: Aug 18, 2024 | 7:45 PM

ತುಂಗಭಧ್ರಾ ಡ್ಯಾಂನ 19ನೇ ಕ್ರಸ್ಟ್‌ ಗೇಟ್ ತಾತ್ಕಾಲಿಕ ಅಳವಡಿಕೆ ಯಶಸ್ವಿಯಾದ ಹಿನ್ನೆಲೆ ಇಂದು (ಭಾನುವಾರ) ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಟಿಬಿ ಡ್ಯಾಂ ಆವರಣದಲ್ಲಿ ಅಭಿನಂದನಾ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಗೇಟ್‌ ಅಳವಡಿಸಲು ವಾರದಿಂದ ಹಗಲಿರುಳು ಎನ್ನದೇ ಶ್ರಮಿಸಿದ ಕಾರ್ಮಿಕರಿಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು.

ವಿಜಯನಗರ, ಆ.18: ತುಂಗಭಧ್ರಾ ಡ್ಯಾಂನ 19ನೇ ಕ್ರಸ್ಟ್‌ ಗೇಟ್ ತಾತ್ಕಾಲಿಕ ಅಳವಡಿಕೆ ಯಶಸ್ವಿಯಾದ ಹಿನ್ನೆಲೆ ಇಂದು (ಭಾನುವಾರ) ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಟಿಬಿ ಡ್ಯಾಂ ಆವರಣದಲ್ಲಿ ಅಭಿನಂದನಾ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಗೇಟ್‌ ಅಳವಡಿಸಲು ವಾರದಿಂದ ಹಗಲಿರುಳು ಎನ್ನದೇ ಶ್ರಮಿಸಿದ ಕಾರ್ಮಿಕರಿಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು. ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಕೊಟ್ಟ ಮಾತಿನಂತೆ ನಾರಾಯಣ ಇಂಜಿನೀಯರ್ಸ್, ಹಿಂದೂಸ್ತಾನ್ ಸ್ಟೀಲ್ ವರ್ಕ್ಸ್ ಹಾಗೂ ಜಿಂದಾಲ್ ನ ಕಂಪನಿ ಸೇರಿದಂತೆ ಡ್ಯಾಂ ಅಳವಡಿಕೆಗೆ ಶ್ರಮಿಸಿದ ಪ್ರತಿ ಕಾರ್ಮಿಕರಿಗೂ ಸನ್ಮಾನದ ಜೊತೆಗೆ 50 ಸಾವಿರ ಹಣವನ್ನ ಕವರ್​ನಲ್ಲಿ ಹಾಕಿ ಬಹುಮಾನ ವಿತರಿಸಲಾಯಿತು. ಜಮೀರ್ ಸೂಚನೆ ಮೇರೆಗೆ ಶಾಸಕ ಜೆ.ಎನ್ ಗಣೇಶ್ ಅವರು ಕಾರ್ಮಿಕರಿಗೆ ಹಣದ ರೂಪದಲ್ಲಿ ಬಹುಮಾನ ನೀಡಿದರು. ಕಾರ್ಮಿಕರಿಗೆ ಬಹುಮಾನ ನೀಡುವುದ ಮೂಲಕ ಕೊಟ್ಟ ಮಾತು ಸಚಿವ ಜಮೀರ್ ಅಹ್ಮದ್ ಉಳಿಸಿಕೊಂಡಿದ್ದಾರೆ. ಇನ್ನು
ಶಾಸಕರಿಗೆ ಜಿಲಾಧಿಕಾರಿ ಎಂ.ಎಸ್. ದಿವಾಕರ್ ಹಾಗೂ ಹೂಡಾ ಅಧ್ಯಕ್ಷರಾದ ನಿಯಾಜ್ ಅಹಮ್ಮದ್ ಸಾಥ್ ನೀಡಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on