International Yoga Day: ಸಿದ್ದರಾಮಯ್ಯಗೆ “ಕನ್ನಡರಾಮಯ್ಯ” ಅಂತ ಬಣ್ಣಿಸಿದ ವಚನಾನಂದ ಶ್ರೀ

|

Updated on: Jun 21, 2024 | 10:37 AM

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈ ಹಿಂದೆ ಅಧಿವೇಶನದಲ್ಲಿ, ಸಭೆಯಲ್ಲಿ ಕನ್ನಡ ಪಾಠ ಮಾಡಿದ ಉದಾಹರಣಗಳಿವೆ. ಶುಕ್ರವಾರ ಅಂತಾರಾಷ್ಟ್ರೀಯ ಯೋಗ (International Yoga Day) ದಿನಾಚರಣೆಯಲ್ಲಿ ಭಾಗಿಯಾದ ವೇಳೆ ಕನ್ನಡದ ಪಾಠ ಮತ್ತೆ ಮುನ್ನಲೆಗೆ ಬಂದಿದೆ. ಅಲ್ಲದೆ, ಶ್ವಾಸ ಗುರು ವಚನಾಂದ ಶ್ರೀಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಹೊಸ ಹೆಸರಿನಿಂದ ಬಣ್ಣಿಸಿದರು. ಇಂದು (ಜೂ.21) ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್‌ ಜಿಂದಾಲ್‌ನ ಬಸವೇಶ್ವರ ನಗರದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ […]

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈ ಹಿಂದೆ ಅಧಿವೇಶನದಲ್ಲಿ, ಸಭೆಯಲ್ಲಿ ಕನ್ನಡ ಪಾಠ ಮಾಡಿದ ಉದಾಹರಣಗಳಿವೆ. ಶುಕ್ರವಾರ ಅಂತಾರಾಷ್ಟ್ರೀಯ ಯೋಗ (International Yoga Day) ದಿನಾಚರಣೆಯಲ್ಲಿ ಭಾಗಿಯಾದ ವೇಳೆ ಕನ್ನಡದ ಪಾಠ ಮತ್ತೆ ಮುನ್ನಲೆಗೆ ಬಂದಿದೆ. ಅಲ್ಲದೆ, ಶ್ವಾಸ ಗುರು ವಚನಾಂದ ಶ್ರೀಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಹೊಸ ಹೆಸರಿನಿಂದ ಬಣ್ಣಿಸಿದರು.

ಇಂದು (ಜೂ.21) ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್‌ ಜಿಂದಾಲ್‌ನ ಬಸವೇಶ್ವರ ನಗರದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾದರು. ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಸಚಿವ ಸಂತೋಷ ಲಾಡ್, ಸಂಸದ ತುಕಾರಾಂ, ನಟಿ ಶ್ರೀಲೀಲಾ ಅವರು ಭಾಗಿಯಾಗಿದ್ದರು.

ಜಿಂದಾಲ್​​ನ ಯೋಗ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದ ವೇಳೆ ವ್ಯಾಕರಣ ವಿಚಾರವಾಗಿ ತಮಾಷೆ ಸಂಗತಿಯೊಂದು ನಡೆದಿದೆ. ಕಾರ್ಯಕ್ರಮದಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿ ಅವರು ಯೋಗ ಹೇಳಿಕೊಟ್ಟರು. ಕೊನೆಗೆ ಯೋಗಾಸನ ಮುಗಿಸುವ ಹಂತದಲ್ಲಿ ನಗುತ್ತ ಜೊತೆಗೆ ಆಸನಗಳನ್ನು ಮಾಡುತ್ತ ಅ,ಆ ಹೇಗೆ ಹೇಳುವುದನ್ನು ಹೇಳಿಕೊಟ್ಟಿದ್ದಾರೆ. ಈ ವೇಳೆ ವಚನಾನಂದ ಶ್ರೀಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರಿತು “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡ ಅಂದರೆ ಬಹಳ ಇಷ್ಟ. ಸಂಧಿ, ಸಮಾಸ ಚೆನ್ನಾಗಿ ಗೊತ್ತು. ಅವರು ಕನ್ನಡರಾಮಯ್ಯ” ಎಂದು ಬಣ್ಣಿಸಿದರು. ವಚನಾನಂದ ಶ್ರೀಗಳ ಬಣ್ಣನೆಗೆ ಸಿದ್ದರಾಮಯ್ಯ ಅವರು ನಕ್ಕರು.

ಇದನ್ನೂ ನೋಡಿ: ರಾಜ್ಯ ನಾಯಕರ ಯೋಗಾಸನದ ಪೋಟೋಸ್ ಇಲ್ಲಿವೆ​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:33 am, Fri, 21 June 24

Follow us on